- Advertisement -
- Advertisement -


ಮಂಗಳೂರು: ರಸ್ತೆ ದಾಟುವಾಗ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಗ್ನಿ ಶಾಮಕ ಇಲಾಖೆ ಚಾಲಕರೋರ್ವರು ಮೃತಪಟ್ಟ ಘಟನೆ ಮಂಗಳೂರು ನಗರದ ಕುಂಟಿಕಾನ ಬಳಿ ನಿನ್ನೆ ರಾತ್ರಿ ನಡೆದಿದೆ.
ಗಂಗಾಧರ ಬಿ. ಕಮ್ಮಾರ (36 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಗಂಗಾಧರ ಅವರು ಮೃತಪಟ್ಟ ಘಟನೆ ನಡೆದಾಗ ಅವರ ಪತ್ನಿ ತನ್ನ ತಮ್ಮನ ಮನೆಯಲ್ಲಿದ್ದರು. ಈ ಸುದ್ದಿ ತಿಳಿದ ಕೂಡಲೇ ಶೃತಿ (30) ಕೂಡ ಮಗ
ಅಭಿರಾಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗಾಧರ ಅವರು ಮಂಗಳೂರಿನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -








