Friday, September 4, 2026
spot_imgspot_img
spot_imgspot_img

ಮಂಗಳೂರು: ಪೊಲೀಸ್ ಠಾಣೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಸಿಬ್ಬಂದಿ.!

- Advertisement -
- Advertisement -

ಮಂಗಳೂರು: ನಗರದ ಸಂಚಾರ ಪಶ್ಚಿಮ ಠಾಣೆಯಲ್ಲಿ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ಗಾಯಾಳು ಹಿರಿಯ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.

ಸೋಮವಾರ ಬೆಳಗ್ಗಿನ ಗಸ್ತು ಕರ್ತವ್ಯಕ್ಕೆ ಸಂಬಂಧಿಸಿ ಠಾಣೆಗೆ ಆಗಮಿಸಿದ ಕಿರಿಯ ಸಿಬ್ಬಂದಿ, ಹಿರಿಯ ಸಿಬ್ಬಂದಿಗಳ ಮಧ್ಯೆ ರೇಗಾಡಿ ಹಲ್ಲೆ ನಡೆಸಿದ್ದಾರೆ . ಬಳಿಕ ಅಲ್ಲಿದ್ದ ಇತರ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಹಿಂದೆಯೂ ಕಿರಿಯ ಸಿಬ್ಬಂದಿಯ ಮೇಲೆ ಅನುಚಿತ ವರ್ತನೆಯ ಆರೋಪ ಕೇಳಿಬಂದಿತ್ತು.

ಕಮಿಷನರ್ ಶಶಿಕುಮಾರ್

ಈ ಕುರಿತು ಅಧೀನ ಅಧಿಕಾರಿಗಳ ವರದಿ ಪಡೆದು ಸೂಕ್ತ ವಿಚಾರಣೆಯ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

Related news

error: Content is protected !!