Monday, June 15, 2026
spot_imgspot_img
spot_imgspot_img

ಮಲ್ಪೆ: ಕಪಾಟಿನಲ್ಲಿ ಅಂಗಿ ತೆಗೆಯುತ್ತಿದ್ದಾಗ ಕಚ್ಚಿದ ನಾಗರಹಾವು; ಚಿಕಿತ್ಸೆ ಫಲಿಸದೆ ಮೃತ್ಯು

- Advertisement -
- Advertisement -

ಮಲ್ಪೆ: ನಾಗರಹಾವು ಕಚ್ಚಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿದಿಯೂರು ಗ್ರಾಮದ ನಿವಾಸಿ ಸುಧಾಕರ ಅಮೀನ್ (55) ಮೃತ ದುರ್ದೈವಿ.

ಕಪಾಟಿನಲ್ಲಿ ನಾಗರ ಹಾವೊಂದು ಬಂದು ಅಡಗಿ ಕುಳಿತಿತ್ತು. ಇದನ್ನರಿಯದೆ ಅಂಗಿ ತೆಗೆಯಲು ಕೈ ಹಾಕಿದಾಗ ನಾಗರ ಹಾವು ಕಚ್ಚಿದೆ. ಕೂಡಲೇ ಸುಧಾಕರ ಅಮೀನ್ ರವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಜೂ.13ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!