- Advertisement -
- Advertisement -


ಉಡುಪಿ: ಇಲ್ಲಿನ ಬಡಗುಬೆಟ್ಟು ಗ್ರಾಮದ ಒಳಕಾಡು ಎಂಬಲ್ಲಿ ಮಿಕ್ಸಿ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಒಳಕಾಡು ನಿವಾಸಿ ಚಂದ್ರ ಜೋಗಿ (43) ಎನ್ನಲಾಗಿದೆ.

ಇವರು ಬ್ರಹ್ಮಾವರ ಖಾಸಗಿ ಶಾಲಾ ಬಸ್ಸಿನ ಚಾಲಕರಾಗಿದ್ದು, ಮನೆಯಲ್ಲಿ ಭಾನುವಾರ ರಾತ್ರಿ ಊಟಕ್ಕೆ ಚಟ್ನಿ ತಯಾರಿಸಲು ಮಿಕ್ಸಿ ಆನ್ ಮಾಡಿದ್ದರು. ಆಗ ಮಿಕ್ಸಿಯ ವಿದ್ಯುತ್ ಪ್ರವಾಹ ತಂತಿಯಲ್ಲಿ ತೊಂದರೆ ಇರುವುದನ್ನು ಇವರು ಸರಿಪಡಿಸಲು ಮುಂದಾದರು. ಈ ವೇಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -








