Tuesday, September 22, 2026
spot_imgspot_img
spot_imgspot_img

ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಸುಳ್ಯದ ದಂಪತಿ

- Advertisement -
- Advertisement -

ಸುಳ್ಯ: ಇಲ್ಲಿನ ಕುಕ್ಕಾಜೆಕಾನದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಮಾಧವ ನಾಯ್ಕ ಹಾಗೂ ಅವರ ಪತ್ನಿ ಉಷಾ ಆತ್ಮಹತ್ಯೆಗೆ ಶರಣಾದವರು.

ಸೋಣಂಗೇರಿ, ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಾಧವ ನಾಯ್ಕ ಅವರು ಪೋಸ್ಟ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಪತ್ನಿ ಹಾಗೂ ಪುತ್ರಿ ಸಮೇತ ಮೈಸೂರಿಗೆ ತೆರಳಿ ಅಲ್ಲಿ ನೆಲೆಸಿದ್ದರು.ಕಳೆದ ವರ್ಷವಷ್ಟೇ ಅವರ ಪುತ್ರಿಯ ವಿವಾಹ ನಡೆದಿತ್ತು. ನಿನ್ನೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಮೈಸೂರಿನಿಂದ ಮೃತದೇಹಗಳನ್ನು ಸುಳ್ಯದ ಅವರ ಕುಕ್ಕಾಜೆಕಾನ ನಿವಾಸಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

vtv vitla
vtv vitla
- Advertisement -

Related news

error: Content is protected !!