Sunday, July 26, 2026
spot_imgspot_img
spot_imgspot_img

ವಿಟ್ಲ: ಅ.14ರಂದು ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ “ಕಿಚನ್ ಹಬ್” ಶುಭಾರಂಭ

- Advertisement -
- Advertisement -
driving

ವಿಟ್ಲ: ಅ.14ರಂದು ಪುತ್ತೂರು – ವಿಟ್ಲ ರಸ್ತೆಯ ವಿ.ಹೆಚ್. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ “ಕಿಚನ್ ಹಬ್” ಶುಭಾರಂಭಗೊಳ್ಳಲಿದೆ. ಈ ಮಳಿಗೆಯಲ್ಲಿ ಕಿಚನ್ ಅಪ್ಲಾಯೆನ್ಸ್, ಟಾಯ್ಸ್, ಗಿಫ್ಟ್ ಐಟಮ್ಸ್ ಲಭ್ಯವಿರಲಿದೆ.

ನೂತನ ಮಳಿಗೆಯನ್ನು ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಮತ್ತು ಶೈಖುನಾ ಮಾಣಿ ಉಸ್ತಾದ್ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಶೋಕಮಾತೆ ಚರ್ಚ್ ನ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್, ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಮಂಗಳೂರಿನ ಶಾಸಕ ಯು.ಟಿ ಖಾದರ್, ಎಸ್.ಡಿ.ಪಿ.ಐ ಮುಖಂಡ ರಿಯಾಝ್ ಫರಂಗಿಪೇಟೆ ಮೊದಲಾದವರು ಭಾಗವಹಿಸಲಿದ್ದಾರೆ.

ಉದ್ಘಾಟನೆ ಪ್ರಯುಕ್ತ ವಿಶೇಷ ಆಕರ್ಷಣೆಯಾಗಿ ಅ.14ರ ಸಂಜೆ 4 ಗಂಟೆಗೆ ‘ಒಲೆ ರಹಿತ ಅಡುಗೆ ಸ್ಪರ್ಧೆ’ ನಡೆಯಲಿದ್ದು, ಮೊದಲು ಹೆಸರು ನೀಡಿದ 25 ಮಂದಿಗೆ ಮಾತ್ರ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹಕ ಸ್ಮರಣಿಕೆ ನೀಡಲಾಗುತ್ತದೆ. ಪ್ರಥಮ ಬಹುಮಾನ 2500 ರೂ. ಖರೀದಿಯ ಕೂಪನ್, ದ್ವಿತೀಯ 1500 ರೂ. ಖರೀದಿಯ ಕೂಪನ್ ನೀಡಲಾಗುತ್ತದೆ.

ಮಳಿಗೆಗೆ ಭೇಟಿ ಕೊಟ್ಟು ಪ್ರತಿ ಗಂಟೆಗೊಮ್ಮೆ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತಿ 500 ಖರೀದಿಯ ಮೇಲೆ ಬಂಪರ್ ಬಹುಮಾನ ಕೂಪನ್ ನೀಡಲಾಗುತ್ತದೆ. ಅಕ್ಟೋಬರ್ 30 ರಂದು ಸಂಜೆ 5:00 ಗಂಟೆಗೆ ಡ್ರಾ ಫಲಿತಾಂಶ ನಡೆಯಲಿದೆ. ಪ್ರಥಮ ಬಹುಮಾನ 5000 ರೂ. ಖರೀದಿಯ ಕೂಪನ್, ದ್ವಿತೀಯ 3000 ರೂ. ಸಾವಿರ ಖರೀದಿಯ ಕೂಪನ್ ಹಾಗೂ 10 ಆಕರ್ಷಕ ಬಹುಮಾನ ಇದೆ ಎಂದು ಮಾಲಕ ಉಬೈದ್ ವಿಟ್ಲ ಬಝಾರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!