Saturday, June 6, 2026
spot_imgspot_img
spot_imgspot_img

ವಿಟ್ಲ: ಅನಾರೋಗ್ಯಕ್ಕೆ ತುತ್ತಾದ ಮಹಿಳೆಗೆ ಆರ್ಥಿಕ ನೆರವಾದ ಕಲಾ ತಪಸ್ವಿ

- Advertisement -
- Advertisement -

ವಿಟ್ಲ: ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲದಿಂದ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದೆ.

ತಂಡದ ಸದಸ್ಯರ ತಾಯಿಯೊಬ್ಬರು ಕಳೆದ ಒಂದೂವರೆ ತಿಂಗಳ ಕಾಲ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಬಂದು ಇದೀಗ ಮುಂದಿನ ಹಂತದ ಚಿಕಿತ್ಸೆಗಳನ್ನು ಪಡೆಯುತ್ತಿರುತ್ತಾರೆ. ಹಿಂದಿನ ವಾರವಷ್ಟೇ ಮುಕ್ತಾಯ ಕಂಡ ಕಲಾ ತಪಸ್ವಿ ತಂಡ ಆಯೋಜಿಸಿದ್ದ “ಕಲಾ ಯಶಸ್ವಿ” ನಾಮಾಂಕಿತ ವಿವಿಧ ಸ್ಪರ್ಧೆಗಳಿಗೆ ಪ್ರಾಯೋಜಕರು ನೀಡಿದ ಧನಸಹಾಯದಲ್ಲಿ ಉಳಿದ ಮೊತ್ತ ಹಾಗೂ ಹಲವಾರು ದಾನಿಗಳ ಸಹಕಾರದಿಂದ ಫಲಾನುಭವಿಗಳಿಗೆ 10,001ರೂ ಸಹಾಯಧನ ಇಂದು ನೀಡಲಾಯಿತು. ಫಲಾನುಭವಿಗಳ ಮನೆಗೆ ಭೇಟಿ ನೀಡಿ, ಅವರೊಂದಿಗೆ ಮಾತನಾಡಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಈ ಸಮಯದಲ್ಲಿ ತಂಡದ ನಿರ್ದೇಶಕರಾದ ಜೈದೀಪ್ ಅಮೈ, ಸ್ಪರ್ಧೆಯ ಅಧ್ಯಕ್ಷರಾಗಿದ್ದ ಅಕ್ಷತಾ ನಡುವಡ್ಕ, ಹಾಗೂ ಸದಸ್ಯರುಗಳಾದ ಲಕ್ಷ್ಮೀಶ ಆಚಾರ್ಯ, ಸುಬ್ರಹ್ಮಣ್ಯ.ಕೆ, ಧನರಾಜ್ ಅಮೈ, ಜಗದೀಶ ನೂಜಿ, ಲಿತಿನ್, ದೀಕ್ಷಿತ್, ಪ್ರದ್ಯುಮ್ನ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!