Sunday, September 27, 2026
spot_imgspot_img
spot_imgspot_img

ವಿಟ್ಲ: ಚಂದಳಿಕೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ಹಾಗೂ ಬಹುಮಾನ ವಿತರಣೆ

- Advertisement -
- Advertisement -
vtv vitla
vtv vitla

ವಿಟ್ಲ: ಚಂದಳಿಕೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರ ಮಹೋತ್ಸವದ ಧ್ವಜಾರೋಹಣ ಹಾಗೂ ಬಹುಮಾನ ವಿತರಣೆ ನಡೆಯಿತು. ಧ್ವಜಾರೋಹಣವನ್ನು ವಿಟ್ಲ ಮಾದರಿ ಶಾಲೆಯ ಗೌರವಾಧ್ಯಕ್ಷ ಸುಬ್ರಾಯ ಪೈ ನೇರವೇರಿಸಿದರು. ನಂತರ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ದಕ ಸಂಘ ವಿಟ್ಲ ಇದರ ಅಧ್ಯಕ್ಷರಾದ ಭವಾನಿ ರೈ, ಕೊಲ್ಯ ವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಸ್ಥಾಪಕ ಶಿಕ್ಷಕ ಕೊರಗಪ್ಪ ರೈ, ಅರ್ಪಣಿಗುತ್ತು, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಪೂಜಾರಿ, ನಿಡ್ಯ, ಪ್ರಗತಿಪರ ಕೃಷಿಕ ಮೋಹನ್ ಕಾಯರ್‌ಮಾರ್, ಭಾರತ್ ಅಡಿಟೋರಿಯಂ ವಿಟ್ಲ ಇದರ ಸಂಜೀವ ಪೂಜಾರಿ, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಕಲ್ಲಕಟ್ಟ, ಸಮೂಹ ಸಂಪನ್ಮೂಲ ಕೇಂದ್ರ ವಿಟ್ಲ ಇದರ ರವಿಪ್ರಕಾಶ್, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಟ್ಲ: ಜ. 31ರಂದು ಚಂದಳಿಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಜ್ರ ಮಹೋತ್ಸವ

ಕಾರ್ಯಕ್ರಮದ ನೇರಪ್ರಸಾರವು ಕೇಬಲ್ ಟಿವಿ ಚಾನೆಲ್ ನಂ. 92 ಹಾಗೂ ವಿಟಿವಿ ಯೂಟ್ಯೂಬ್’ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

- Advertisement -

Related news

error: Content is protected !!