Thursday, July 23, 2026
spot_imgspot_img
spot_imgspot_img

ವಿಟ್ಲ: ದೇವಸ್ಥಾನದ ದಾರಿಗೆ ಮಸೀದಿಯ ದ್ವಾರ; ತೆರವುಗೊಳಿಸುವಂತೆ ಒತ್ತಾಯ; ವಿಟ್ಲ ತಾಲೂಕು ಹಿಂ.ಜಾ.ವೇ ಉಗ್ರ ಹೋರಾಟದ ಎಚ್ಚರಿಕೆ..!

- Advertisement -
- Advertisement -

ವಿಟ್ಲ: ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ಶ್ರೀ ಕ್ಷೆತ್ರ ಕಟ್ಟತಿಲ ಶ್ರೀ ಮಹಾಮ್ಮಾಯಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡವಾಗಿ ಮಸೀದಿಯ ಶಾಶ್ವತ ಅನಧಿಕೃತ ದ್ವಾರ ಹಾಕಿರುವುದರಿಂದ ಇದರ ವಿರುದ್ಧ ಸ್ಥಳಿಯಾಡಳಿತ (ಸಾಲೆತ್ತುರು ಗ್ರಾಮ ಪಂಚಾಯತ್), ಪಂಚಾಯತ್ ಪಿಡಿಓ, ಬಂಟ್ವಾಳ ತಾಲೂಕು ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ (PWD) ಇವರುಗಳಿಗೆ ದೂರು ಸಲ್ಲಿಸಿದರೂ ಕೂಡಾ ದ್ವಾರ ತೆರವುಗೊಳಿಸುವ ಯಾವುದೇ ಕ್ರಮ ಈ ಕ್ಷಣದವರೆಗೆ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಹಿಂದೂ ಜಾಗರಣ ವೇದಿಕೆ ವಿಭಾಗ ಪ್ರಮುಖರು, ಜಿಲ್ಲಾ ಪ್ರಮುಖರು ಹಾಗೂ ವಿಟ್ಲ ತಾಲೂಕು ಪ್ರಮುಖರು ದೇವಸ್ಥಾನದ ಆಡಳಿತ ಸಮೀತಿ ಜೊತೆಗೆ ಚರ್ಚಿಸಿ
ಇದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ ಹಾಗೂ ಪಿಡಿಓ ಗೆ ಒತ್ತಾಯಿಸಿದರು ಮತ್ತು ಹಿಂದೂಗಳ ಜೊತೆಗೆ ಸದಾ ಇದ್ದೇವೆ ಎಂಬ ಸಂದೇಶವನ್ನು ನೀಡಿದರು.

ತಕ್ಷಣ ಈ ದ್ವಾರ ತೆರವು ಗೊಳಿಸದಿದ್ದರೆ ಹಿಂದು ಜಾಗರಣ ವೇದಿಕೆ ಇದರ ವಿರುದ್ದ ಉಗ್ರವಾದ ಹೋರಾಟವನ್ನು ಮಾಡಲಿದೆ ಎಂಬ ಎಚ್ಚರಿಕೆಯನ್ನು ನೀಡಿತು.

- Advertisement -

Related news

error: Content is protected !!