Tuesday, August 11, 2026
spot_imgspot_img
spot_imgspot_img

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆಗೈದ ಪ್ರಕರಣ; ವಿಚಾರಣೆ ನಡೆಸಿದ ವೇಳೆ ಬಾಯಿ ಬಿಟ್ಟ ಕುಖ್ಯಾತ ಸಲಿಂಗಕಾಮಿ ಅದ್ರಾಮ

- Advertisement -
- Advertisement -

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ಆರೋಪ ಥಳುಕು ಹಾಕಿಕೊಂಡಿದೆ.

ಬಂಧಿತ ಆರೋಪಿಯಾಗಿರುವ ಬೋಳಂತೂರು ನಿವಾಸಿ ಆಟೋ ಚಾಲಕ ಅದ್ರಾಮ ಎಂಬಾತ 19 ವರ್ಷದ ಯುವಕ ಸಮದ್ ಎಂಬಾತನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣವಾಗಿದ್ದು, ಈ ಪ್ರಕರಣವನ್ನು ಭೇದಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಮದ್

ಸಲಿಂಗಕಾಮಿ ಆಟೋ ಚಾಲಕ ಅದ್ರಾಮ.?

! ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಒಬ್ಬ ಕುಖ್ಯಾತ ಸಲಿಂಗಕಾಮಿ ಎನ್ನುವ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಹಲವು ಅಪ್ರಾಪ್ತ ಬಾಲಕರನ್ನು ಬಳಸಿ ಸಾರ್ವಜನಿಕವಾಗಿ ಒದೆ ತಿಂದಿದ್ದ.

ವಿಟ್ಲ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ @ ಸಮದ್ ಕೆಲ ದಿನಗಳ ನಾಪತ್ತೆಯಾಗಿದ್ದ. ರವಿವಾರ ರಾತ್ರಿ ವೇಳೆ ಯುವಕನನ್ನು ಕಿಡ್ನಾಪ್ ನಡೆಸಿದ್ದಾನೆ. ಬಳಿಕ ಮಂಚಿ ಇರಾ, ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಅದ್ರಾಮ.

ಆರೋಪಿಯನ್ನು ಬಂಧಿಸಿರುವ ವಿಟ್ಲ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!