Monday, July 27, 2026
spot_imgspot_img
spot_imgspot_img

ವಿಟ್ಲ: ಮಂಗಳ ಮಂಟಪದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

- Advertisement -
- Advertisement -

ವಿಟ್ಲದ ಮಂಗಳ ಮಂಟಪದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು. ಈ ಶಿಬಿರದಲ್ಲಿ ಎಲುಬು, ಕಣ್ಣು, ಕಿವಿ, ಹೀಗೆ ವಿವಿಧ ರೀತಿಯ ತಪಾಸಣೆ ನಡೆಯಿತು. ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಲಯನ್ಸ್ ಕ್ಲಬ್ ವಿಟ್ಲ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಚಂದಳಿಕೆ ,ವಿಟ್ಲ ಯಲ್. ಯನ್. ಯಸ್. ಯಂ. ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಕೆ. ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ವಿಟ್ಲ ಮಂಗಳ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕೃಷ್ಣ ಮುದೂರು, ಅವೆಂಚೂರ ಆರ್ಗನಿಕ ಇದರ ಆಡಳಿತ ನಿರ್ದೇಶಕ ಡಾ. ವಿಷುಕುಮಾರ್, ವಿಟ್ಲ ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ಮೋಹನ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂತೋಷ್ ಶೆಟ್ಟಿ.

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ಇದರ ನಿರ್ದೇಶಕ ವರ್ಧಮಾನ್ ಜೈನ್, ಅಧ್ಯಕ್ಷ ಎಂ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮರಾಜ್, ಕಾರ್ಯನಿರ್ವಹಣಾಧಿಕಾರಿ ಜ್ಞಾನ, ಕೆಎಂಸಿ ಮೆಡಿಕಲ್ ಕ್ಯಾಂಪ್‌ನ ವೈದ್ಯಾಧಿಕಾರಿ ಡಾ. ಕನಿಷ್ಕ್, ದಂತವೈದ್ಯಾಧಿಕಾರಿ ಅವಿನಾಶ್, ಸುಬ್ಬು ಸಂಟ್ಯಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!