- Advertisement -
- Advertisement -
ವಿಟ್ಲ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದಿದೆ. ವಿಟ್ಲ- ಕಾಸರಗೋಡು ರಸ್ತೆಯ ಸಾರಡ್ಕ ಚೆಕ್ ಪೋಸ್ಟ್ ಬಳಿ ಗುಡ್ಡ ಕುಸಿದ ಘಟನೆ ನಡೆದಿದ್ದು ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಮಣ್ಣು ಕುಸಿದ ಪರಿಣಾಮ ಬೈಕ್ ಜಖಂಗೊಂಡಿದೆ. ಇನ್ನು ಪಿಡಬ್ಲ್ಯೂಡಿ ಇಲಾಖೆ, ವಿಟ್ಲ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
- Advertisement -