ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ಸೈಂಟ್ ರೀಟಾ ವಿದ್ಯಾ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು, ಧ್ವಜಾರೋಹಣ ವನ್ನು ನಡೆಸಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲಯನ್ಸ್ ಪ್ರಾಂತೀಯ
ಅಧ್ಯಕ್ಷ ಸುದರ್ಶನ್ ಪಡಿಯರ್ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷ ಶ್ರೀ ಬಿ ಸಂದೇಶ ಶೆಟ್ಟಿಯವರು ಸ್ವಾತಂತ್ಯೋತ್ಸವ ದಿನಾಚರಣೆಯ ಬಗ್ಗೆ ದೇಶಪ್ರೇಮ ಹಾಗೂ ಸೌಹಾರ್ದತೆ ಸಮಾನತೆಯ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಬಗ್ಗೆ ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರೀಶ್ ಶೆಟ್ಟಿ ಡಿ, ಕೋಶಾಧಿಕಾರಿ ಓ ಎ ಕೃಷ್ಣ, ಸಕ್ರಿಯ ಸದಸ್ಯರುಗಳಾದ, ಸುರೇಶ್ ಬನಾರಿ, ಸದಾನಂದ ಗೌಡ ಸೇರಾಜೆ, ದಿನಕರ್ ಆಳ್ವ, ಧರಣಪ್ಪ ಗೌಡ, ಮೋಹನ್ ಕಟ್ಟೆ, ಜಯರಾಮ್ ಬಲ್ಲಾಳ್, ಸಂತೋಷ್ , ವಿದ್ಯಾ ಸಂಸ್ಥೆಯ ಸಂಚಾಲಕರಾದ ಫಾದರ್ ಐವನ್ ಮೈಕಲ್ ರೋಡ್ರಿ ಗಸ್, ಶಾಲಾ ಮುಖ್ಯೋಪಾಧ್ಯಾಯರಾದ ಫಾದರ್ ಸುನಿಲ್ ಪಿಂಟೋ, ಸಿಸ್ಟರ್ ಜೊನೆಟ್, ಮತ್ತು ಸಿಸ್ಟರ್ ಮರಿನಾ, ಚರ್ಚಿನ ಉಪಾಧ್ಯಕ್ಷ ಮನೋಹರ್ ಲ್ಯಾನ್ಸಿ, ಮತ್ತು ಪದಾಧಿಕಾರಿಗಳು, ಶಿಕ್ಷಕ ವೃಂದದವರು, ಶಾಲಾ ಮಕ್ಕಳು, ಪೋಷಕರು ಮುಂತಾದವರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ 1700 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಪೋಷಕರಿಗೆ ಕ್ಲಬ್ ನ ಸಿಹಿ ತಿಂಡಿ ವಿತರಿಸಲಾಯಿತು.


ಕಾರ್ಯಕ್ರಮದ ಬಳಿಕ 75 ನೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ, ಶಾಲಾ ಶಿಕ್ಷಕ ವೃಂದ ಆಡಳಿತ ಮಂಡಳಿ, ಕ್ಲಬ್ ನ ಸರ್ವ ಸದಸ್ಯರು ಸೇರಿ, ಕ್ಲಬ್ ನ ವತಿಯಿಂದ ಏರ್ಪಡಿಸಲಾಯಿತು.










