Monday, July 27, 2026
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ

- Advertisement -
- Advertisement -
vtv vitla
vtv vitla
vtv vitla

“ಮತದಾನ ಸಂಭ್ರಮಿಸಿದಾಗ ದೇಶ ಬದಲಾಗುತ್ತದೆ”. ಹೀರೊ ಎಂಬಾತ ಸಾಮಾನ್ಯವಾಗಿ ಒಬ್ಬ ಸಾಧಾರಣ ವ್ಯಕ್ತಿಯಾಗಿರುತ್ತಾನೆ. ಆತನಿಗೆ ಎಡೆಬಿಡದೆ ಎದುರಾಗುವ ಕಷ್ಟಗಳು, ಮುಖಾಮುಖಿಯಾಗುವ ಪ್ರಶ್ನೆಗಳು, ಸಮಸ್ಯೆಗಳು ಅವನನ್ನು ಚುರುಕಾಗಿಸುತ್ತದೆ ಮತ್ತು ಉತ್ತಮ ನಾಯಕನನ್ನಾಗಿಸುತ್ತದೆ.

ಹೀಗೆ ಮತದಾನ-ಪೂರ್ವ ಮತಯಾಚನೆ, ಮತ ಗಿಟ್ಟಿಸುವ ಭರವಸೆಯ ಮಹಪೂರ, ಸಾಮಾನ್ಯ ಪ್ರಜೆಗಳ ಅಸಾಮಾನ್ಯ ಹಂಬಲಕ್ಕೆ ಬೆಂಬಲ ಕೊಡುವ ಚುನಾವಣಾ ಸಭೆ ಆಕರ್ಷಕವಾಗಿ ನಡೆದಿದೆ.

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಚುನಾವಣೆಯಲ್ಲಿ ನ.16 ರಂದು ಚುನಾವಣಾ ದಿನ ನಿಗದಿಯಾಗಿ ಅಭ್ಯರ್ಥಿಗಳು ತಮ್ಮ ವಾರ್ಡ್ಗಳಾದ 5 ನೇ ತರಗತಿಯಿಂದ 10ನೇ ತರಗತಿ ವರೆಗೂ ವಾರಕ್ಕೆ ಮೊದಲೇ ಮತಯಾಚನೆ ಎಂಬ ಫೀಲ್ಡ್ ವರ್ಕ್ ಮಾಡಿದ್ದರು.

SPL (ವಿದ್ಯಾರ್ಥಿ ನಾಯಕ) ಮತ್ತು ASPL (ವಿದ್ಯಾರ್ಥಿ ಉಪನಾಯಕ) ಎಂಬ ಎರಡು ಸ್ಥಾನಗಳಿದ್ದರೂ ಸ್ಪರ್ದಿಸಿದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 16 (5 ಮಂದಿ SPL ಗೆ +11ಮಂದಿ ASPL ಗೆ). ಚುನಾವಣಾ ಅಧಿಕಾರಿಯಾಗಿ ಪ್ರಾಂಶುಪಾಲರು, ಹಾಗೂ ಶಿಕ್ಷಕರ ಚುನಾವಣಾ ಸಮಿತಿ ನಾಮನಿರ್ದೇಶಿತರೆಲ್ಲರಿಗೂ ಅವಕಾಶ ನೀಡಿತ್ತು.

ಚುನಾವಣಾ ದಿನ ಬೆಳಿಗ್ಗೆ ಅಭ್ಯರ್ಥಿಗಳು ಹಾಗೂ ಮತದಾರರ ವಿಶೇಷ ಜಂಟಿ ಸಭೆಯು ಚುನಾವಣೆಗೆ ಮೆರುಗು ತಂದಿತ್ತು. ಶಾಲಾ ಮತದಾರರ ಸಾಮಾನ್ಯ ಸೌಕರ್ಯವನ್ನೊದಗಿಸುವ ಸೂಕ್ಷ್ಮ ಪ್ರಶ್ನೆಗಳಿಗೆ ಚುರುಕಾಗಿಯೇ ಭರವಸೆಯ ಮಾತುಗಳು ಅಭ್ಯರ್ಥಿಗಳಿಂದ ನೀಡಲ್ಪಟ್ಟಿರುವುದನ್ನು ಪ್ರಶಂಸಿದವರು ಗೌರವ ಉಪಸ್ಥಿತರಿದ್ದ ಪತ್ರಿಕಾ ವರದಿಗಾರರಾದ ವಿಷ್ಣುಗುಪ್ತ ಪುಣಚ ಹಾಗೂ ಮೊಹಮ್ಮದ್ ಆಲಿ ಯವರು.

ಅಪರಾಹ್ನ ಚುನಾವಣ ಕಾರ್ಯಕ್ರಮ ನಡೆಯಿತು. ಮೂರು ಮತಗಟ್ಟೆಗಳಲ್ಲಿ ಸುಮಾರು 585 ವಿದ್ಯಾರ್ಥಿ ಮತದಾರರು ಶಿಸ್ತಿನಿಂದ ಮತ ಚಲಾಯಿಸಿದರು. ಪ್ರತಿ ಮತಗಟ್ಟೆಗಳಲ್ಲಿ ಶಿಕ್ಷಕರೇ ಅಧಿಕಾರಿಗಳಾಗಿ ಭಾಗವಹಿಸಿದ್ದರು.

ಸಾಮಾನ್ಯವಾಗಿ ನಡೆಯುವ ಮತದಾನದಂತೆ ಶಾಲಾ ID, ಶಾಯಿ ಬಳಸಿ, ಮತ ಚೀಟಿ ಮಡಚಿ, ಮತ ಪೆಟ್ಟಿಗೆ ಮೊದಲಾದ ಮತ ಚಲಾಯಿಸುವ ಪದ್ಧತಿ ವಿದ್ಯಾರ್ಥಿಗಳಿಗೆ ಪರಿಚಯಿಸಿದಂತಾಯಿತು. ನಂತರ ಅಭ್ಯರ್ಥಿಗಳು ಮತ್ತು ಎಲ್ಲಾ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಮತ ಎಣಿಕೆ ನಡೆದು, ಅಂತಿಮವಾಗಿ ಫಲಿತಾಂಶವನ್ನು ಪ್ರಕಟಿಸಲಾಯಿತು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ 10ನೇ ತರಗತಿಯ ಅನನ್ಯ ಆಚಾರ್ ಕೆ. ಹಾಗೂ ಶಾಲಾ ವಿದ್ಯಾರ್ಥಿ ಉಪನಾಯಕಿಯಾಗಿ 7ನೇ ತರಗತಿಯ ಚಾರ್ವಿ ರೈ ಆಯ್ಕೆಯಾದರು. ಆಯ್ಕೆಗೊಂಡ ನಾಯಕರಿಂದ ಕ್ರತಜ್ಞತಾ ಭಾಷಣ ನಡೆಯಿತು. ಸ್ಪರ್ದಿಸಿದ ಎಲ್ಲರೀಗೂ ಚುನಾವಣಾಧಿಕಾರಿಗಳು ಸ್ಪರ್ಧೆಯ ಪ್ರಾಮುಖ್ಯತೆ ಮತ್ತು ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ದೈಹಿಕ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಿಕ್ಷಕರೆಲ್ಲರೂ ಸಹಕರಿಸಿದರು.

ವರದಿ: ರಾಧಾಕೃಷ್ಣ ಎರುಂಬು

vtv vitla
- Advertisement -

Related news

error: Content is protected !!