Friday, July 24, 2026
spot_imgspot_img
spot_imgspot_img

ವಿಮಾನ ನಾಪತ್ತೆ ಪ್ರಕರಣ; ಬೆಟ್ಟದ ಅಂಚಿಗೆ ಡಿಕ್ಕಿ ಹೊಡೆದು ಪತನ – 22 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ

- Advertisement -
- Advertisement -

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ ಸ್ಥಳವನ್ನು ಪತ್ತೆಹಚ್ಚಿವೆ. ಮುಸ್ತಾಂಗ್‌ ನಲ್ಲಿ ವಿಮಾನ ಅಪಘಾತವಾಗಿದೆ. ವಿಮಾನದಲ್ಲಿದ್ದ ಎಲ್ಲಾ 22 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಘಟನಾ ಸ್ಥಳದಿಂದ 14 ಶವಗಳನ್ನು ಸಂಗ್ರಹಿಸಲಾಗಿದೆ.

ಸ್ಥಳದ ದೃಶ್ಯವನ್ನು ಸಹ ಹಂಚಿಕೊಳ್ಳಲಾಗಿದೆ. ತಾರಾ ಏರ್‌ ನ ಸಣ್ಣ, ಅವಳಿ ಎಂಜಿನ್ ವಿಮಾನವು ಭಾನುವಾರ ಬೆಳಿಗ್ಗೆ ನೇಪಾಳದ ಪೋಖರಾನ್‌ ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿತ್ತು. ಇದರಲ್ಲಿ ನಾಲ್ವರು ಭಾರತೀಯರು ಕೂಡ ಇದ್ದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನ ಬೆಟ್ಟದ ಅಂಚಿಗೆ ಡಿಕ್ಕಿ ಹೊಡೆದು ಪತನವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತೀಯರೂ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆ

- Advertisement -

Related news

error: Content is protected !!