Wednesday, July 22, 2026
spot_imgspot_img
spot_imgspot_img

ಶಾರ್ಜಾದಿಂದ ಊರಿಗೆ ಬರುತ್ತಿದ್ದ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವು

- Advertisement -
- Advertisement -

ಕೇರಳ: ಶಾರ್ಜಾದಿಂದ ಹುಟ್ಟೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ತನ್ನವರನ್ನು ಸೇರುವ ಮುನ್ನವೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದೆ. ಮೊಹಮ್ಮದ್ ಫೈಸಲ್ (40) ಮೃತ ದುರ್ದೈವಿ.

ಶಾರ್ಜಾದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಫೈಸಲ್ ತನ್ನವರನ್ನು ನೋಡೋ ಕಾತರದಿಂದ ಹುಟ್ಟೂರಿಗೆ ಆಗಮಿಸುತ್ತಿದ್ದರು. ಅವರ ಪತ್ನಿ, ಮಕ್ಕಳು ಕೂಡ ಫೈಸಲ್ ಗಾಗಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು.ಇನ್ನು ಹುಟ್ಟೂರು ಬಂತು ನನ್ನವರನ್ನು ನೋಡೇ ಬಿಟ್ಟೆ ಅನ್ನುವಷ್ಟರಲ್ಲಿ ಫೈಸಲ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಅಪ್ಪ ಬಂದ್ರು ಅನ್ನೋ ಖುಷಿಯಲ್ಲಿದ್ದ ಮಕ್ಕಳು, ಪತಿಯನ್ನು ನೋಡುತ್ತೇನೆ ಅನ್ನೋ ತವಕದಲ್ಲಿ ಪತಿ, ಮನೆ ಮಗನನ್ನು ನೋಡೋ ಸಂಭ್ರಮದಲ್ಲಿದ್ದ ಪೋಷಕರು ಕೊನೆಗೆ ಫೈಸಲ್ ಅವರ ಮೃತದೇಹವನ್ನು ಮನೆಗೆ ಕೊಂಡೊಯ್ಯುವಂತಾಗಿದ್ದು ಮಾತ್ರ ದುರಂತ.

- Advertisement -

Related news

error: Content is protected !!