- Advertisement -
- Advertisement -
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಮಂಗಳೂರು ರೈಲ್ವೇಯ ಸುಬ್ರಹ್ಮಣ್ಯ ಸಮೀಪ ರೈಲು ಚಾಲಕನ ಸಮಯಪ್ರಜ್ಞೆಯಿಂದ ಬಿರುಕು ಬಿಟ್ಟಿದ್ದ ಹಳಿಯಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.
ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣದಿಂದ( ಸುಬ್ರಹ್ಮಣ್ಯ ರೋಡ್) ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ, ನಿಲುಗಡೆ ಮಾಡಿ ಘಟನೆಯನ್ನು ಇಲಾಖೆ ಗಮನಕ್ಕೆ ತಂದಿದ್ದಾರೆ.
ಬಳಿಕ ಕಾರ್ಯಾಚರಣೆ ನಡೆಸಿ ಹಳಿ ದುರಸ್ತಿ ನಡೆಸಲಾಯಿತು.ನಂತರ ರೈಲು ಸಂಚರಿಸಲು ಅವಕಾಶ ನೀಡಲಾಯಿತು.ಚಾಲಕನ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
- Advertisement -