
ಸುಳ್ಯ: ಗುರುದೇವ ಲಲಿತಕಲಾ ಅಕಾಡೆಮಿ(ರಿ) ಅರ್ಪಿಸುವ “ಮೂರ್ಜೆ ಶ್ರೀ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಸ್ಮರಣಾರ್ಥ” ರಾಷ್ಟ್ರೀಯ ಮಟ್ಟದ ನೃತ್ಯೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನ “ಮೇದಿನಿ ಉತ್ಸವ”ವು ನ.26 ಮತ್ತು 27 ರಂದು ಕನಕ ಕಲಾಗ್ರಾಮ ಕನಕಮಜಲು ಸುಳ್ಯ ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.26 ರಂದು ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಮೂರ್ಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಗೌಡ ಮೂರ್ಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಬಿ.ಗಿರೀಶ್ ಭಾರದ್ವಾಜ್, ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಪುತ್ತೂರು ಎಸ್.ಡಿ.ಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಕೃಷ್ಣ ಪಣಾಜೆ, ಸುಳ್ಯ ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನ.27 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯ ಶಾಸಕರು ಸುಳ್ಯ, ಮೀನುಗಾರಿಕೆ , ಬಂದರು ಮತ್ತು ದ್ವೀಪ ಸಾರಿಗೆ ಸಚಿವ ಎಸ್.ಅಂಗಾರ, ಪದ್ಮಾವತಿ ಉಪೇಂದ್ರ ಕಾಮತ್ ಗಣೇಶ ಗೋಡಂಬಿ ಕಾರ್ಖಾನೆ, ಅಂಕಣಕಾರರು ಮತ್ತು ಜೇನುಕೃಷಿ ತಜ್ಞ ಕುಮಾರ್ ಪೆರ್ನಾಜೆ, ಕನಕಮಜಲು ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ ನೆಡಿಲು, ಕನಕಮಜಲು ಸ್ವರ್ಣ ಮಹಿಳಾ ಮಂಡಳಿ ಅಧ್ಯಕ್ಷ ಸುಶೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗುರುದೇವ ಲಲಿತಕಲಾ ಅಕಾಡೆಮಿ ಕಲಾ ನಿರ್ದೇಶಕ ಡಾ. ಚೇತನ ರಾಧಾಕೃಷ್ಣ ಪಿ.ಎಂ ಅಧ್ಯಕ್ಷತೆ ವಹಿಸಲಿದ್ದಾರೆ. ದಾಮೋದರ ಕಣಜಾಲು ನಿರೂಪಿಸಲಿದ್ದಾರೆ.

ದಿನಾಂಕ 26 ಮತ್ತು 27 ರಂದು ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.









