Sunday, August 2, 2026
spot_imgspot_img
spot_imgspot_img

ಹನುಮ ಮಾಲಾಧಾರಿಗಳ ಯಾತ್ರೆ; ಜಾಮಿಯಾ ಮಸೀದಿ ಬಳಿ ಉದ್ವಿಗ್ನ ಪರಿಸ್ಥಿತಿ

- Advertisement -
- Advertisement -

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯುತ್ತಿದ್ದ ವೇಳೆ ಜಾಮಿಯಾ ಮಸೀದಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾರುವ ಘಟನೆ ನಡೆದಿದೆ.

ದೇವಾಲಯದಿಂದ ಹೊರಟ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಲುಪಬೇಕಾಗಿದ್ದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಸಾವಿರಾರು ಸಂಖ್ಯೆಯಲ್ಲಿದ್ದ ಹನುಮ ಮಾಲಾಧಾರಿಗಳಿಂದ ಮಸೀದಿ ಬಳಿ ಜೈ ಶ್ರೀರಾಮ್ ಘೋಷವಾಕ್ಯಗಳು ಮೊಳಗಿದ್ದು,ಮಸೀದಿ ಸುತ್ತ ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಒಳಹೋಗಲು ಯತ್ನಿಸಲಾಗಿದೆ.

ಸ್ಥಳದಲ್ಲಿದ್ದ ಭಾರಿ ಸಂಖ್ಯೆಯ ಪೊಲೀಸರು ಹಿಂದೂ ಕಾರ್ಯಕರ್ತರನ್ನ ಒಳ ನುಗ್ಗದಂತೆ ತಡೆದಿದ್ದು, ಹನುಮ ಮಾಲಾಧಾರಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ.

- Advertisement -

Related news

error: Content is protected !!