Tuesday, June 16, 2026
spot_imgspot_img
spot_imgspot_img

ಹೆಬ್ರಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಹೆಬ್ರಿ: ಕಡಿಮೆ ಅಂಕ ಪಡೆದ ಹಿನ್ನೆಲೆ ಆಡಳಿತ ಮಂಡಳಿ ಬೈದ ಪರಿಣಾಮವಾಗಿ ಹೆಬ್ರಿ ಎಸ್ ಆರ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೃಪ್ತಿ (16) ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 27ರ ಸಂಜೆ ಪೆರ್ಡೂರಿನಲ್ಲಿ ಸಂಭವಿಸಿದೆ.

ತೃಪ್ತಿ ಪೆರ್ಡೂರು ನಿವಾಸಿ ಸುರೇಶ್ ಮೆಂಡನ್ ಯಾನೆ ಸೂರಿ ಮತ್ತು ಹೇಮ ದಂಪತಿ ಪುತ್ರಿ . ಎಸ್ .ಆರ್ ಶಿಕ್ಷಣ ಸಂಸ್ಥೆಯಲ್ಲೇ ಪ್ರೌಢಶಿಕ್ಷಣ ಪಡೆದು ಕಳೆದ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಿನ್ನೆಲೆ ಪಿಯುಸಿ (ವಿಜ್ಞಾನ ವಿಭಾಗ) ವಿದ್ಯಾಭ್ಯಾಸಕ್ಕೆ ಕಾಲೇಜಿನಲ್ಲಿ ಫ್ರೀ ಸೀಟ್ ಪಡೆದಿದ್ದರು. ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಆಡಳಿತ ಮಂಡಳಿ ತೃಪ್ತಿಯನ್ನು ಬೈದಿದ್ದಾರೆ, ಮತ್ತು ಫೈನ್ ಹಾಗೂ ಸಂಪೂರ್ಣ ಫೀಸ್ ಕಟ್ಟಬೇಕೆಂದಿದ್ದಾರೆ ಎಂದು ಕಳೆದ ಮೂರು ದಿನಗಳ ಹಿಂದೆ ತೃಪ್ತಿ ತಂದೆಯ ಬಳಿ ಹೇಳಿಕೊಂಡಿದ್ದರು.

ಆದರೆ ಮಾನಸಿಕವಾಗಿ ನೊಂದ ತೃಪ್ತಿ ಆದಿತ್ಯವಾರ ಸಂಜೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸುರೇಶ್ ಮೆಂಡನ್ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!