Friday, September 25, 2026
spot_imgspot_img
spot_imgspot_img

ಉಡುಪಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ; ಲಕ್ಷಾಂತರ ರೂ.ನಷ್ಟ

- Advertisement -
- Advertisement -

ಉಡುಪಿ: ಇಂಡಸ್ಟ್ರಿಯಲ್ ಏರಿಯಾದ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ವೆಸ್ಟೆಕ್ ಎಂಟರ್ ಪ್ರೈಸಸ್ ಪ್ರೈ.ಲಿ ಎಂಬ ಫ್ಯಾಕ್ಟರಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಇದೊಂದು ಕೆಮಿಕಲ್ ಫ್ಯಾಕ್ಟರಿಯಾದ ಕಾರಣ ಬೆಂಕಿ ತೀವ್ರ ಸ್ವರೂಪದಲ್ಲಿ ಹಬ್ಬಿ ಬೆಂಕಿಯ ಕೆನ್ನಾಲಗೆ ಆಕಾಶದೆತ್ತರಕ್ಕೆ ಚಿಮ್ಮಿದೆ. ಘಟನಾ ಸ್ಥಳದ ಸುತ್ತಮುತ್ತ ಕೆಲಕಾಲ ದಟ್ಟ ಹೊಗೆ ಆವರಿಸಿ ಆತಂಕಕ್ಕೂ ಕಾರಣವಾಯಿತು.

ಬಳಿಕ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ . ಕೆಮಿಕಲ್ ಫ್ಯಾಕ್ಟರಿಯಾದ ಕಾರಣ ಭಾರೀ ಪ್ರಮಾಣದ ಆಯಿಲ್ ಗಳು ಬೆಂಕಿಗೆ ಈಡಾಗಿ ಇಡೀ ಫ್ಯಾಕ್ಟರಿ ಧಗಧಗನೆ ಉರಿಯಿತು.

ದಟ್ಟ ಹೊಗೆಯೊಂದಿಗೆ ಸುಟ್ಟ ವಾಸನೆ ಹಬ್ಬಿದ್ದರಿಂದ ಸ್ಥಳೀಯರು ರಾತ್ರಿ ವೇಳೆ ಕೆಲಹೊತ್ತು ನಿದ್ದೆ ಕಳೆದುಕೊಳ್ಳಬೇಕಾಯಿತು. ಘಟನೆಯಿಂದಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!