- Advertisement -
- Advertisement -


ಕಲ್ಲಡ್ಕ: ದಿನಾಂಕ 9-12 -2021 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ CDS ಬಿಪಿನ್ ರಾವತ್ ಹಾಗೂ ಸೇನಾ ತಂಡದವರಿಗೆ ನುಡಿನಮನ ಸಲ್ಲಿಸಲಾಯಿತು.

“ನಾಲ್ಕು ದಶಕಗಳಿಂದ ಸೇನೆಯಲ್ಲಿ ನಿರತರಾದ ಸೇನಾ ವೀರ, ಉರಿ, ಸರ್ಜಿಕಲ್ ಸ್ಟ್ರೈಕ್ , ಡೊಕ್ಲಾಂಗ್ ಮೀಟಿಂಗ್ ನ ಚತುರ, ಚೀನಾ ವಿರುದ್ಧ ಗಟ್ಟಿ ನಿಲುವು ಹೊಂದಿದ ಧೀರನನ್ನು ಭಾರತ ದೇಶ ಕಳೆದುಕೊಂಡು ಭಾವುಕವಾಗಿದೆ. ಅವರ ತ್ಯಾಗ, ಶೌರ್ಯ, ಪರಾಕ್ರಮ, ಅನನ್ಯ ದೇಶಭಕ್ತಿ ಸರ್ವರಿಗೂ ಆದರ್ಶ. ಅವರ ಪ್ರೇಮ ನಮಗೆಲ್ಲರಿಗೂ ದೇಶಕಟ್ಟುವಲ್ಲಿ ದಾರಿದೀವಿಗೆಯಾಗಲಿ” ಎಂದು ಅಧ್ಯಾಪಕರಾದ ಸುಮಂತ್ ಆಳ್ವ ನುಡಿನಮನ ಸಲ್ಲಿಸಿದರು.

ಬಿಪಿನ್ ರಾವತ್ ಅವರ ಭಾವಚಿತ್ರದ ಮುಂದೆ ದೀಪ ಹಚ್ಚಿ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮಾತೃಭಾರತಿ ಸಮಿತಿಯ ಸದಸ್ಯರಾದ ಬೇಬಿ ಹಾಗೂ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ರೂಪಕಲಾ ನಿರೂಪಿಸಿದರು.



- Advertisement -








