Friday, October 2, 2026
spot_imgspot_img
spot_imgspot_img

ಕಾರ್ಕಳ: ಪೆಟ್ರೋಲ್ ಬಂಕ್ ಗೆ ನುಗ್ಗಿ ಕಳ್ಳತನ ಮಾಡಿದ ಆರೋಪಿ ಸೆರೆ!

- Advertisement -
- Advertisement -

ಕಾರ್ಕಳ: ಸಾಣೂರು ಸಿದ್ದಿವಿನಾಯಕ ಪೆಟ್ರೋಲ್ ಬಂಕ್ ನ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೂಡುಬಿದಿರೆಯ ಬೆಳುವಾಯಿಯ ಮುಡಾಯಿಕಾಡು ಸಂತೋಷ್ ಶೆಟ್ಟಿ ಎನ್ನಲಾಗಿದೆ.

ಆರೋಪಿ ಸಂತೋಷ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಾರ್ಕಳ ಅನಂತ ಶಯನದಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂ ಒಡೆದು ಕಳವಿಗೆ ಪ್ರಯತ್ನಿಸಿದ್ದು, ಅದೇ ದಿನ ಸಾಣೂರು ಸಿದ್ದಿವಿನಾಯಕ ಪೆಟ್ರೋಲ್ ಬಂಕ್ ನ ಬೀಗ ಮುರಿದು ಕಳ್ಳತನ ಮಾಡಿದ್ದಾಗಿ ಹಾಗೂ ಕೊಡ್ಯಡ್ಕ ಪೆಟ್ರೋಲ್ ಬಂಕ್ ನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದನ್ನು ಪೊಲೀಸರ ಮುಂದೆ ಹೇಳಿದ್ದಾನೆ.

ಈತ ಮಂಗಳೂರು, ಮೂಡುಬಿದಿರೆ ಕಾರ್ಕಳ ಮಾರ್ಗದಲ್ಲಿ ಬಸ್ಸು ಚಾಲಕನಾಗಿದ್ದ. ಮಂಗಳೂರು ಉರ್ವ ಠಾಣೆಯಲ್ಲೂ ಕೊಲೆ ಪ್ರಕರಣ, ಬೈಕ್ ಕಳ್ಳತನ ಹಾಗೂ ಮನೆಗೆ ಬೆಂಕಿ ಹಾಕಿದ ಪ್ರಕರಣಗಳಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

- Advertisement -

Related news

error: Content is protected !!