Thursday, June 18, 2026
spot_imgspot_img
spot_imgspot_img

ಕಾರ್ಕಳ: ಬಸ್ ಮತ್ತು ಬೊಲೆರೊ ನಡುವೆ ಅಪಘಾತ

- Advertisement -
- Advertisement -

ಕಾರ್ಕಳ: ಹಿರ್ಗಾನ ಬಳಿ ಬಸ್ ಮತ್ತು ಬೊಲೆರೊ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಸಂಜೆ ಹಿರ್ಗಾನದ ದುಗ್ಗಣರಾಯ ಚಡಾವು ಎಂಬಲ್ಲಿ ನಡೆದಿದೆ.

ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಬಸ್‌ನ ಮುಂಭಾಗ ಹಾಗೂ ಬೊಲೆರೊ ಗಾಡಿಯ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್ ಕಾರ್ಕಳದಿಂದ ಹೆಬ್ರಿಯ ಕಡೆಗೆ ಸಾಗುತಿತ್ತು. ಇದೆ ಸ್ಥಳದಲ್ಲಿ ರಸ್ತೆಯ ಮೋರಿ ಕುಸಿತ ಗೊಂಡಿದ್ದು ಕಾಮಗಾರಿಯು ನಡೆಯುತ್ತಿದೆ. ಈ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು.

ಅಪಘಾತದಿಂದಾಗಿ ಪರಿಸರದಲ್ಲಿ ಇತರ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಇದೆ ಸ್ಥಳದಲ್ಲಿ ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಬಸ್ ಹಾಗೂ ಪಿಕ್ ಅಪ್ ಜೀಪು ಡಿಕ್ಕಿ ಹೊಡೆದಿರುವುದನ್ನು ಸ್ಮರಿಸಬಹುದು.

- Advertisement -

Related news

error: Content is protected !!