Sunday, June 14, 2026
spot_imgspot_img
spot_imgspot_img

ಮಂಗಳೂರು: ಬಾಲಕಿಗೆ ಮೊಬೈಲ್ ನಂಬರ್ ನೀಡಿ ಕರೆ ಮಾಡಿದ ಬಸ್ ನಿರ್ವಾಹಕನಿಗೆ ತಾಯಿಯಿಂದ ಥಳಿತ

- Advertisement -
- Advertisement -

ಮಂಗಳೂರು: ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿದ್ದಲ್ಲದೆ ಕರೆ ಮಾಡಿ ಮಾತನಾಡಿದ ಬಸ್ ನಿರ್ವಾಹಕನೋರ್ವನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಭಾರೀ ವೈರಲ್ ಆಗಿದೆ.

ಮಂಗಳೂರಿನಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಬಸ್‌ನಲ್ಲಿ ಸಂಚರಿಸುತ್ತಿದ್ದಾಗ ಮಾತನಾಡಿಸಿದ ಬಸ್ ನಿರ್ವಾಹಕ ಬಳಿಕ ಮೊಬೈಲ್ ನಂಬರ್‌ನ್ನು ಆಕೆಗೆ ನೀಡಿದ್ದಾನೆ. ಅಲ್ಲದೆ,ಬಾಲಕಿಯೊಂದಿಗೆ ಮಾತನಾಡಿ ಮನೆಯಲ್ಲಿ ಯಾರ್‍ಯಾರಿದ್ದಾರೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಬಾಲಕಿಯ ತಾಯಿ ನಿರ್ವಾಹಕನನ್ನು ಭೇಟಿಯಾಗಿ ಆತನಿಗೆ ಹಿಗ್ಗಾಮಗ್ಗ ಥಳಿಸಿದ್ದಾಳೆ.

vtv vitla
vtv vitla

ಬಸ್ ನಿರ್ವಾಹಕ ಈ ಮೊದಲು ಕೂಡಾ ಅದೇ ರೀತಿಯ ದುರ್ವರ್ತನೆ ತೋರಿದ್ದ ಎಂಬುದಾಗಿ ವೀಡಿಯೋದಲ್ಲಿ ಸೆರೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

- Advertisement -

Related news

error: Content is protected !!