Sunday, August 14, 2022
spot_imgspot_img
spot_imgspot_img

ಕಾಳಿ ಬಾಯಲ್ಲಿ ಸಿಗರೇಟ್‌..! ಕೈಯಲ್ಲಿ ಪ್ರೈಡ್‌ ಬಾವುಟ – ನಿರ್ದೇಶಕಿ ವಿರುದ್ಧ ಗರಂ

- Advertisement -G L Acharya G L Acharya
- Advertisement -

ಸಿನೆಮಾ ರಂಗದಲ್ಲಿ ಈ ಹಿಂದೆಯೂ ಹಿಂದೂ ದೇವಾನುದೇವತೆಗಳ ಬಗ್ಗೆ ಅವಹೇಳನ ಮಾಡಿದ್ದನ್ನು ಕಂಡಿದ್ದೇವೆ. ಈಗ ಮತ್ತದೇ ರೀತಿಯಲ್ಲಿ ಓರ್ವ ನಿರ್ಮಾಪಕಿ/ನಿರ್ದೇಶಕಿ ಹಿಂದೂಗಳ ಭಾವನೆಯನ್ನು ಕೆರಳಿಸಿದ ಘಟನೆ ನಡೆದಿದೆ. ನಿರ್ಮಾಪಕಿ ಲೀನಾ ಮಣಿಮೇಲೈ ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಳಿಯ ಒಂದು ಕೈಯಲ್ಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಸಲಿಂಗಿಗಳ ಬಾವುಟವನ್ನು ( LGBTQ) ಹಿಡಿದಿರುವಂತೆ ಪೋಸ್ಟರ್​ ರಿಲೀಸ್​ ಮಾಡಲಾಗಿದ್ದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಕಾಳಿಯ ಒಂದು ಕೈಯಲ್ಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಸಲಿಂಗಿಗಳ ಬಾವುಟವನ್ನು ( LGBTQ) ಹಿಡಿದಿರುವಂತೆ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಪೋಸ್ಟರ್ ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೆಸ್ಟಿವಲ್‌ನಲ್ಲಿ (ರಿದಮ್ಸ್ ಆಫ್ ಕೆನಡಾ) ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಲೀನಾ ಅವರ ಸಾಕ್ಷ್ಯಚಿತ್ರದ ಹೆಸರು ಕಾಳಿ. ಈ ಪೋಸ್ಟರ್‌ನಲ್ಲಿ ಕಾಳಿ ಸಿಗರೇಟ್ ಸೇದುತ್ತಿರುವುದು, LGBTQ ಧ್ವಜ ಹಿಡಿದಿರುವುದನ್ನು ತೋರಿಸಲಾಗಿದ್ದು, ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಗಳ‌ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅಂತ ಕಿಡಿಕಾರಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಅರೆಸ್ಟ್ ಲೀನಾ ಮಣಿಮೇಕಲೈ ಎಂಬ ಹ್ಯಾಶ್​ಟ್ಯಾಗ್​ ಟ್ರೆಂಡ್​ ಮಾಡಿದ್ದಾರೆ.

ತಾಕತ್ತಿದ್ದರೆ ಬೇರೆ ಧರ್ಮೀಯರನ್ನು ಈ ರೀತಿಯಾಗಿ ಚಿತ್ರಿಸಿ..!
ಇನ್ನು ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಪದೇ ಪದೇ ಹಿಂದೂ ದೇವರನ್ನು ಅವಮಾನಿಸುತ್ತಿರುವವರು ತಾಕತ್ತಿದ್ದರೆ ಅನ್ಯಧರ್ಮಿಯರ ದೇವರನ್ನು ಅವಮಾನಿಸಿ ಎಂದು ಪ್ರಶ್ನಿಸಿದ್ದಾರೆ.

- Advertisement -

Related news

error: Content is protected !!