Wednesday, September 23, 2026
spot_imgspot_img
spot_imgspot_img

ಕಾಸರಗೋಡು: ಕಾರು ಅಪಹರಣ ಪ್ರಕರಣ; ಆರೋಪಿಯ ಬಂಧನ..!

- Advertisement -
- Advertisement -

ಕಾಸರಗೋಡು: ಕಾರು ಚಾಲಕನಿಗೆ ಬೆದರಿಕೆಯೊಡ್ಡಿ ನಗದು ದರೋಡೆ ಮಾಡಿ ಕಾರು ಅಪಹರಿಸಿದ್ದ ಪ್ರಕರಣದ ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಬಂಧಿಸಿದೆ.

ಮೀಯಪದವು ಅಡ್ಕತ್ತಗುರಿಯ ರಹೀಮ್ ಬಂಧಿತ ಆರೋಪಿ. ಈತ ಮಾರ್ಚ್ 3ರಂದು ಪೈವಳಿಕೆ ನಿವಾಸಿಯನ್ನು ಬೆದರಿಸಿ ಕಾರು ಮತ್ತು 18 ಸಾವಿರ ರೂ. ನಗದನ್ನು ದರೋಡೆ ನಡೆಸಿದ್ದ. ಘಟನೆ ಸಂಬಂಧ ಸನಿಹದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

vtv vitla
vtv vitla

ಆರೋಪಿಗಾಗಿ ಶೋಧ ನಡೆಸಿದ್ದ ಪೊಲೀಸರು ಇದೀಗ ಪೈವಳಿಕೆ ಬಾಯಿಕಟ್ಟೆ ಎಂಬಲ್ಲಿಂದ ಆತನನ್ನು ಬಂಧಿಸಿದ್ದಾರೆ.

ಈತ ಪೋಲೀಸರ ಕೊಲೆಗೆ ಯತ್ನ, ಮಾದಕ ವಸ್ತು ಸಾಗಾಟ ಹಾಗೂ ಇನ್ನಿತರ ಪ್ರಕರಣಗಳ ಆರೋಪಿಯಾಗಿದ್ದಾನೆ.

vtv vitla
vtv vitla
- Advertisement -

Related news

error: Content is protected !!