

ಕುಂದಾಪುರ: ಶಾಲೆ ತೆರಳುತ್ತಿದ್ದಾಗ ವಂಬೈ ಸಮೀಪದ ಚಿತ್ತೂರು ಎಂಬಲ್ಲಿ ದನವೊಂದು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಶಿಕ್ಷಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ (32) ಮೃತ ದುರ್ದೈವಿ.
ನಿನ್ನೆ ಬೆಳಿಗ್ಗೆ ಕರ್ತವ್ಯಕ್ಕೆಂದು ತಮ್ಮ ಮನೆ ಸೆಳೆಕೋಡಿನಿಂದ ಹೆಮ್ಮಾರಿ ಶಾಲೆಗೆ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ದನವೊಂದು ಅಡ್ಡ ಬಂದಿತ್ತು. ಈ ವೇಳೆ ಅಂಬಿಕಾ ಅವರ ಪತಿ ಶ್ರೀಕಾಂತ್ ಬ್ರೇಕ್ ಹಾಕಿದ್ದು, ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಸಹ ಸವಾರ ಅಂಬಿಕಾ ಅವರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಶ್ರೀಕಾಂತ್ ನಾವುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಪ್ರತಿದಿನ ಜೊತೆಯಲ್ಲಿಯೇ ಬರುತ್ತಿದ್ದರು. ಅಂಬಿಕಾ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಹೊಂದಿದ್ದಾರೆ.
