


ಬಂಟ್ವಾಳ : ನೇರಳಕಟ್ಟೆಯ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರಶೀದ್ ಪರ್ಲೊಟ್ಟು ಧ್ವಜಾರೋಹಣಗೈದರು. ನೇರಳಕಟ್ಟೆ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿರಂಜನ್ ರೈ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಊರಿನ ಪ್ರಮುಖರಾದ ಅಬ್ಬಾಸ್ ನೇರಳಕಟ್ಟೆ, ಎನ್.ಕೆ.ಕಾಸಿಂ,ಪ್ರಕಾಶ್ ರೈ ಕುರ್ಲೆತ್ತಿಮಾರು, ನಾರಾಯಣ ಟೈಲರ್ ಪೆರಾಜೆ, ಪಿ.ಕೆ. ಅಬ್ಬಾಸ್ ಪರ್ಲೊ ಟ್ಟು, ಫಾರೂಕ್ ಗೋಳಿಕಟ್ಟೆ, ದಿನಕರ ನಾಯಕ್, ಪೂವಪ್ಪ ನೇರಳಕಟ್ಟೆ, ರಝಾಕ್ ಸಾಹೇಬ್, ಬದ್ರುದ್ದಿನ್ ನೇರಳಕಟ್ಟೆ, ಝುಬೈರ್ ಪರ್ಲೊಟ್ಟು, ಮುನೀರ್ ಕೊಡಾಜೆ, ಮನ್ಸೂರ್ ನೇರಳಕಟ್ಟೆ, ಶರೀಫ್ ಭಗವಂತ ಕೋಡಿ, ಸಲೀಂ ಮಾಣಿ, ಎನ್.ಕೆ.ಅಬೂಬಕ್ಕರ್, ಸಲೀಂ ಸಾಲಿ ಕೊಡಾಜೆ, ಮೊದಲಾದವರು ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅತಾವುಲ್ಲಾ, ಪ್ರಕಾಶ್ ಮುರುವ, ಇಮ್ತಿಯಾಜ್ ಕೊಡಾಜೆ, ಆಸಿಫ್ ನೇರಳಕಟ್ಟೆ, ಮಸೂದ್ ಹಾಜಿ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಸುಮಿತ್ರ ಕೆ.ಎನ್. ಸ್ವಾಗತಿಸಿ, ಶಿಕ್ಷಕಿ ಅನಿತ ವಿಲ್ಮ ವಂದಿಸಿದರು. ಸಹ ಶಿಕ್ಷಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.








