

ಉಪ್ಪಿನಂಗಡಿ: ಯುವಕರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.12ರಂದು ರಾತ್ರಿ ಕೆಲಸ ಮುಗಿಸಿ ಫಾಯಿಝಾ (18) ಅವರು ಪರಿಚಿತರಾದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ ಅವರೊಂದಿಗೆ ಕಾರಿನಲ್ಲಿ ಮನೆಗೆ ಬಂದಿದ್ದರು. ಫಾಯಿಝಾ ಅವರನ್ನು ಮನೆಗೆ ಬಿಟ್ಟು ಉಳಿದ ಮೂವರು ಕಡಬದ ಕೊಣಾಲು ಕೋಲ್ಪೆ ಕಡೆಗೆ ತೆರಳಿದ್ದರು.ಅವರು ಕೋಲ್ಪೆ ತಲುಪಿದ ವೇಳೆ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಎಂಬವರು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಸ್ಥಳಕ್ಕೆ ಬಂದ ಫಾಯಿಝಾ, ಜಮಾಲ್ ಹಾಗೂ ಫಾಯಿಝಾ ಅವರ ತಂಗಿಗೂ ಅವಾಚ್ಯವಾಗಿ ಬೈದು ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಂತೆ BNS ಕಲಂ 189(2), 191(2), 126(2), 352, 115(2), 351(2) ಜೊತೆಗೆ 190ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








