Friday, May 20, 2022
spot_imgspot_img
spot_imgspot_img

ಕುಕ್ಕೆ ಸುಬ್ರಹ್ಮಣ್ಯ ಹೆಚ್ಚಿದ ಭಕ್ತರ ದಂಡು; ವಸತಿ ಗೃಹದಲ್ಲಿ ಜಾಗವಿಲ್ಲದೆ ರಸ್ತೆಯಲ್ಲೇ ಮಲಗಿದ್ದ ಭಕ್ತರು

- Advertisement -
- Advertisement -

ಸುಬ್ರಹ್ಮಣ್ಯ: ರಾಜ್ಯದಲ್ಲಿ ಸರಣಿ ರಜೆಗಳ ಹಿನ್ನೆಲೆ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಸತಿಗೃಹಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಸತಿಗೃಹ ಫುಲ್ ಆದ ಹಿನ್ನೆಲೆ ಭಕ್ತರು ರಸ್ತೆಯುದ್ದಕ್ಕೂ ಮಲಗಿದ್ದಾರೆ.

ಸಾಲು ಸಾಲು ರಜೆ ಹಿನ್ನೆಲೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಕುಕ್ಕೆಗೆ ಆಗಮಿಸುತ್ತಿದ್ದಾರೆ. ನಿನ್ನೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ವಸತಿಗೃಹಗಳು ಫುಲ್ ಆದ ಹಿನ್ನೆಲೆಯಲ್ಲಿ ಕಂಗಾಲಾದ ಭಕ್ತರು ರಸ್ತೆ, ಪುಟ್ ಪಾತ್, ಬಸ್ ನಿಲ್ದಾಣ, ಹಾಗೂ ವಾಹನಗಳಲ್ಲಿ ಮಲಗಿ ರಾತ್ರಿ ಕಳೆದರು.

ಮಹಿಳೆಯರು ಸೊಳ್ಳೆ ಕಾಟ ಮತ್ತೊಂದೆಡೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಇಡೀ ರಾತ್ರಿ ಕಳೆದಿದ್ದಾರೆ.

vtv vitla
- Advertisement -

Related news

error: Content is protected !!