Saturday, June 13, 2026
spot_imgspot_img
spot_imgspot_img

ಚಿಕಿತ್ಸೆಗೆ ಬರುತ್ತಿದ್ದ ಯುವತಿಯರ ಜೊತೆ ಕಾಮದಾಹ ತೀರಿಸಿಕೊಳ್ಳುತ್ತಿದ್ದ ಕಾಮುಕ ಡಾಕ್ಟರ್‌

- Advertisement -
- Advertisement -

ಕಾಮುಕ ವೈದ್ಯನೊಬ್ಬ ತನ್ನ ತೀಟೆ ತೀರಿಸಿಕೊಳ್ಳಲು ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ವೈದ್ಯರೆಂದರೆ ರೋಗಿಗಳು ದೇವರೆಂದು ನಂಬುತ್ತಾರೆ. ಅದರೆ ಉಬೇದುಲ್ಲಾ ಎಂಬ ವೈದ್ಯ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಚಿಕಿತ್ಸೆಗೆಂದು ತನ್ನ ಅಜ್ಜಿಯ ಜೊತೆ ಬಂದ 19 ವರ್ಷದ ಯುವತಿಗೆ ಈ ದುಷ್ಟ ಲೈಂಗಿಕ ಕಿರುಕುಳ ನೀಡಿದ್ದಾನೆ.

ಹೊಟ್ಟೆ ನೋವು ಎಂದು ಹೋಗಿದ್ದ ಯುವತಿಯನ್ನು ಚಿಕಿತ್ಸೆ ನೀಡುವುದಾಗಿ ಬೆಡ್ ಮೇಲೆ ಮಲಗಿಸಿ ಡ್ರಿಪ್ಸ್ ಹಾಕಿದ್ದಾನೆ. ಈ ವೇಳೆ ಅಜ್ಜಿಯನ್ನ ಹೊರ ಕೂರುವಂತೆ ಹೇಳಿದ್ದಾನೆ. ಈ ಸಮಯವನ್ನು ದುರುಪಯೋಗಪಡಿಸಿಕೊಂಡ ಕಾಮುಕ ವೈದ್ಯ ಯುವತಿಯ ಮೈಕೈ ಮುಟ್ಟಿ ಕುಚೇಷ್ಠೆ ಮೆರೆದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ನೀನು ಮೇಲೆ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದಾನೆ. ಇಲ್ಲಿ ನಡೆದ ವಿಷಯವನ್ನು ಯಾರಿಗಾದರೂ ಹೇಳಿದರೆ ಸರಿ ಇರಲ್ಲ ಎಂದು ಹೆದರಿಸಿ ಮನೆಗೆ ಕಳಿಸಿದ್ದಾನೆ. ವೈದ್ಯನಿಗೆ ಹೆದರಿ ಯುವತಿ ಯಾರಿಗೂ ಹೇಳದೆ ಸುಮ್ಮನಿದ್ದಳು. ನಂತರ ಘಟನೆಯಿಂದ ಭಯಭೀತಗೊಂಡಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡಿತ್ತು.

ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ಹೋಗೋಣ ಎಂದು ಮತ್ತೆ ಉಬೇದುಲ್ಲಾನ ಕ್ಲಿನಿಕ್‌ಗೆ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಹೆದರಿದ ಯುವತಿ ಆ ಕ್ಲಿನಿಕ್ ಬರುವುದಿಲ್ಲ ಎಂದಿದ್ದಾಳೆ. ಯುವತಿಯ ಅಣ್ಣಂದಿರುವ ಕಾರಣ ಕೇಳಿದಾಗ ಯುವತಿ ಕಾಮುಕನ ಅಸಲಿ ಕಹಾನಿಯನ್ನು ತರೆದಿಟ್ಟಿದ್ದಾಳೆ.

ಇದರಿಂದ ಆಕ್ರೋಶಗೊಂಡ ಯುವತಿಯ ಅಣ್ಣಂದಿರು ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ. ಕಾಮುಕ ವೈದ್ಯ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಚಂದ್ರಲೇಔಟ್ ಬಳಿ ಇರುವ ಅರುಂಧತಿ ನಗರದಲ್ಲಿರುವ ಕ್ಲಿನಿಕ್ ಇದಾಗಿದ್ದು, ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕಾಮುಕ ವೈದ್ಯನ ವಿರುದ್ಧ ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!