Monday, August 31, 2026
spot_imgspot_img
spot_imgspot_img

ಡಿ.31ರ ಕರ್ನಾಟಕ ಬಂದ್ ವಾಪಸ್; ಸಿಎಂ ಸಂಧಾನ ಫಲಪ್ರದ

- Advertisement -
- Advertisement -
vtv vitla
vtv vitla

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿಯ ಉಪಟಳ ನಿಯಂತ್ರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವಾಪಸ್ ಪಡೆಯಲಾಗಿದೆ.

vtv vitla

ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆ ಸಭೆ ನಡೆಸಿದ್ದು, ಮುಖ್ಯಮಂತ್ರಿಗಳ ಸಂಧಾನ ಫಲಪ್ರದವಾಗಿದೆ. ಕನ್ನಡ ಪರ ಸಂಘಟನೆಗಳ ಮುಖಂಡರ ಜೊತೆ ಮುಖ್ಯಮಂತ್ರಿ ಮಾತುಕತೆ ನಡೆಸಿದರು. ಹಾಗೂ ಕರ್ನಾಟಕ ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಮುಖಂಡರು ನಾಳಿನ ಬಂದ್ ಹಿಂಪಡೆದಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನಾಳಿನ ಬಂದ್ ವಾಪಸ್ ಪಡೆಯಲು ವಾಟಾಳ್ ನಾಗರಾಜ್ ಮತ್ತು ಸಾ. ರಾ. ಗೋವಿಂದ್ ಸ್ಪಂದಿಸಿದ್ದು, ಅವರಿಗೆ ಧನ್ಯವಾದಗಳು ಎಂದರು.

vtv vitla
vtv vitla
- Advertisement -

Related news

error: Content is protected !!