Thursday, July 23, 2026
spot_imgspot_img
spot_imgspot_img

ಉತ್ತರ ಪ್ರದೇಶ: ಭೀಕರ ಬಿರುಗಾಳಿ, ಮಳೆಗೆ ತಗಡಿನ ಶೆಡ್ ಸಮೇತ 300 ಮೀಟರ್ ದೂರ ಹಾರಿದ ವ್ಯಕ್ತಿ!- ವಿಡಿಯೊ ವೈರಲ್

- Advertisement -
- Advertisement -

ಲಕ್ನೊ: ಬುಧವಾರ ಬೀಸಿದ ‌ ಬಿರುಗಾಳಿ, ಮಳೆ, ಸಿಡಿಲಿಗೆ ಉತ್ತರ ಪ್ರದೇಶದಾದ್ಯಂತ‌ ಕನಿಷ್ಠ 87 ಮಂದಿ ಮೃತಪಟ್ಟಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಾಶ ಸಂಭವಿಸಿದೆ.

ಈ ವೇಳೆ ಭಮೋರಾ ಎಂಬಲ್ಲಿ ಬಿರುಗಾಳಿಯ ತೀವ್ರತೆಗೆ ವ್ಯಕ್ತಿಯೊಬ್ಬರು ಗಾಳಿಯಲ್ಲಿ ಹಾರಿಹೋಗಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‘Dainik Jagaran’ ವರದಿಯ ಪ್ರಕಾರ, ಬೀಕರ ಬಿರುಗಾಳಿಯು ವ್ಯಕ್ತಿಯೊಬ್ಬರನ್ನು ಗಾಳಿಯಲ್ಲಿ ಹಾರಿಸಿಕೊಂಡು ಹೋಗಿದೆ. ಸುಮಾರು 300 ಮೀಟರ್ ದೂರದಷ್ಟು ಗಾಳಿಯಲ್ಲಿ ಹಾರಿದ ಅವರು ಬಯಲೊಂದರಲ್ಲಿ ಬಿದ್ದಿದ್ದಾರೆ.
ಭಮೋರಾ ಪ್ರದೇಶದ ಬಬಿಯಾನ ಗ್ರಾಮದ ನಿವಾಸಿ ನಮ್ಹೆ ನಿಯಾನ್ ಎಂಬವರು ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ವಿವಾಹ ಕಾರ್ಯಕ್ರಮವೊಂದರಲ್ಲಿ ಸ್ಥಾಪಿಸಲಾಗಿದ್ದ ತಗಡಿನ ಶೆಡ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಬಲವಾಗಿ ಬೀಸಿದ ಬಿರುಗಾಳಿಗೆ ಇಡೀ ಶೆಡ್‌ನೊಂದಿಗೆ ನಿಯಾನ್ ಹಾರಿಕೊಂಡು ಹೋಗಿದ್ದು, ಸುಮಾರು 300 ಮೀಟರ್ ದೂರದ ಬಯಲಿನಲ್ಲಿ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೂಳೆ ಮುರಿತಕ್ಕೀಡಾಗಿರುವ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!