


ಮಾಜಿ ಪ್ರಿಯಕರ ಅನೂಪ್ ಪಿಳ್ಳೈ ನಟಿ ಅನಿಕಾ ವಿಜಯ್ ವಿಕ್ರಮನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮುಖದ ರಕ್ತಸಿಕ್ತ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು,ಮುಖ, ಕಣ್ಣುಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆ ಎಂದು ಅನುಭವಿಸಿದ ಯಾತನೆಯನ್ನು ಇಂಚಿಂಚಾಗಿ ಕ್ರೂರ ಪ್ರಿಯಕರನ ಬಗ್ಗೆ ಹೇಳಿಕೊಂಡಿದ್ದಾರೆ.
‘ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವನು ಹಲವು ತಿಂಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ತೊಂದರೆ ಕೊಡುತ್ತಲೇ ಬಂದ. ಈಗಾಗಲೇ ಎರಡು ಬಾರಿ ಥಳಿಸಿ, ಅನುಮಾನ ಪಡುವ ರೀತಿಯಲ್ಲಿ ಪ್ರಶ್ನೆ ಮಾಡುವುದು, ಹೀಗೆ ನಿರಂತರವಾಗಿ ಕಿರುಕುಳ ಕೊಡುತ್ತಾ, ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಪೊಲೀಸರು ಕೂಡ ಅವನಿಗೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಈ ವಿಷಯ ಕುರಿತು ಬೆಂಗಳೂರು ಪೊಲೀಸರಿಗೆ ದೂರು ನೀಡಿದರೂ ಗಮನಿಸದೆ ಅವನಿಂದ ದೂರ ಇರು ಎಂದು ನನಗೆ ಸಲಹೆ ನೀಡಿದರು. ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ. ಎಂದು ಬೆಂಗಳೂರು ಪೊಲೀಸರ ಮೇಲೂ ಅನಿಕಾ ದೂರಿದ್ದಾರೆ. ಪ್ರಿಯಕರನ ವಿರುದ್ಧದ ಕ್ರಮ ತೆಗೆದು ಕೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.