Friday, October 2, 2026
spot_imgspot_img
spot_imgspot_img

ನೆಲ್ಯಾಡಿ: ವಿಷಪೂರಿತ ಹಾವು ಕಡಿದು ವ್ಯಕ್ತಿ ಸಾವು!

- Advertisement -
- Advertisement -
driving

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ವ್ಯಕ್ತಿಯೊಬ್ಬರು ಗದ್ದೆಗೆ ಹೋಗಿದ್ದ ವೇಳೆ ವಿಷಪೂರಿತ ಹಾವು ಕಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ನಾರಾಯಣ ಶೆಟ್ಟಿ (57)ಎನ್ನಲಾಗಿದೆ.

ಕೂಲಿ ಕಾರ್ಮಿಕರಾಗಿರುವ ನಾರಾಯಣ ಶೆಟ್ಟಿಯವರು ಅ.7ರಂದು ಬೆಳಿಗ್ಗೆ ಗದ್ದೆಗೆ ಹೋದಾಗ ಯಾವುದೋ ವಿಷಕಾರಿ ಹಾವಿನ ಕಡಿತಕ್ಕೊಳಗಾಗಿದ್ದಾರೆ. ಕೂಡಲೇ ಮನೆಗೆ ಬಂದ ಅವರು ತೀವ್ರ ಅಸ್ವಸ್ಥಗೊಂಡಿದ್ದರು.

ಬಳಿಕ ಅವರನ್ನು ಮನೆಯವರು ನಾಟಿವೈದ್ಯರೊಬ್ಬರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಇದರಿಂದ ಚೇತರಿಸಿಕೊಂಡಿದ್ದ ನಾರಾಯಣ ಶೆಟ್ಟಿಯವರು ಸಂಜೆ ವೇಳೆಗೆ ಮತ್ತೆ ವಾಂತಿ ಮಾಡಲಾರಂಭಿಸಿ ಅಸ್ವಸ್ಥಗೊಂಡರು. ಅ.೮ರಂದು ಬೆಳಿಗ್ಗೆ ಅವರನ್ನು ನೆಲ್ಯಾ ಡಿಯ ಆಸ್ಪತ್ರೆಗೆ ಚಿಕಿತ್ಸೆ ಗೆಂದು ಕರೆ ತರಲಾಯಿತಾದರೂ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!