- Advertisement -
- Advertisement -
ಪಡುಬಿದ್ರಿ: ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದು ಯುವತಿ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ಬುಧವಾರ ನಡೆದಿದೆ. ಬೈಕ್ ಚಾಲಕ ಯುವಕ ಗಾಯಗೊಂಡಿದ್ದಾನೆ.

ಪಡುಬಿದ್ರಿ ಕಂಚಿನಡ್ಕ ನಿವಾಸಿ ನಿಹಾಳ (19) ಮೃತ ಯುವತಿ. ಬೈಕ್ ಸವಾರ ಬೆಳಪುವಿನ ಆಸಿಫ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿ ಆಸಿಫ್ ಪಲ್ಸರ್ ಬೈಕ್‌ನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಇವರಿಗೆ ಮದುವೆ ನಿಶ್ಚಿಯವಾಗಿತ್ತು ಎಂದು ತಿಳಿದು ಬಂದಿದೆ.

- Advertisement -








