

ಧರ್ಮ ದೈವ ತಂಡದ ಹೊಸ ಚಿತ್ರ ಪರಿಣಿತದ ಮೊದಲ ನೋಟ ಬಿಡುಗಡೆಗೊಂಡಿದ್ದು, ಚಿತ್ರದ ನಟ ಅಕ್ಷಯ್ ರೈ ಅವರ ಮೊದಲ ನೋಟ ಎಲ್ಲರ ಗಮನ ಸೆಳೆದಿದೆ.
ರಿದ್ವಿ ಕ್ರಿಯೆಷನ್ ಅಡಿಯಲ್ಲಿ ಸುಧೀರ್ ಮತ್ತು ಕವಿತಾ ಸುಧೀರ್ ನಿರ್ಮಾಣಮಾಡುತ್ತಿರುವ ಪರಿಣಿತ ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶಿಸುತ್ತಿದ್ದು, ಹಮೀದ್ ಪುತ್ತೂರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ಮೂರು ಪ್ರಮುಖ ವಿಭಾಗವನ್ನು ಧನು ರೈ ನಿರ್ವಹಿಸುತ್ತಿದ್ದು, ನಿತಿನ್ ಕಾನಾವು ಟೈಟಲ್ ಡಿಸೈನ್ ಮಾಡಿದ್ದಾರೆ. ಧರ್ಮ ದೈವ ತಂಡದ ಬಹುತೇಕ ತಾಂತ್ರಿಕ ವರ್ಗ ಈ ಚಿತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಮೂಲತಃ ಇಂಜಿನಿಯರ್ ಆಗಿರುವ ಅಕ್ಷಯ್ ರೈ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿದ್ದು ನಾಯಕಿಯ ಬಗ್ಗೆ ಚಿತ್ರ ತಂಡ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.
ನಟ ಸುಂದರ್ ರೈ ಮಂದಾರ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಪೂರ್ಣ ನಿರ್ವಹಣಾ ಕೆಲಸವನ್ನು ಸುಧಾಕರ್ ಪಡೀಲ್,ಕೌಶಿಕ್ ರೈ ತೋಟ ನಿರ್ವಹಿಸುತ್ತಿದ್ದೂ ತಂಡಕ್ಕೆ ಕೆಲವೊಂದು ಹೊಸ ಮುಖಗಳು ಸೇರಿಕೊಂಡಿವೆ. ಧರ್ಮ ದೈವ ಮತ್ತು ಆಕೆ ಮೋಹಿನಿ ಎಂಬ ವಿಭಿನ್ನ ಚಿತ್ರ ನೀಡಿ ಗಮನ ಸೆಳೆದ ತಂಡ ಪರಿಣಿತ ಮೊದಲ ನೋಟ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿದೆ.
- ಅರಬ್ಬಿ ಸಮುದ್ರದಲ್ಲಿ 3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ; ಇರಾನಿನ ದೋಣಿಯಲ್ಲಿದ್ದ 5 ಪಾಕ್ ಪ್ರಜೆಗಳ ಬಂಧನ
- MRPLನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ
- ಜಮ್ಮು-ಕಾಶ್ಮೀರದಲ್ಲಿ ಟಾಪ್ ಲಷ್ಕರ್ ಉಗ್ರ ಫೌಜಿ ಮೂಸಾ ಎನ್ಕೌಂಟರ್ನಲ್ಲಿ ಹತ್ಯೆ..!
- ಚಿಕ್ಕಮಗಳೂರಿನಲ್ಲಿ ನಕಲಿ ಲೇಡಿ ಪಿಎಸ್ಐ ಅರೆಸ್ಟ್: 25 ಮಂದಿಗೆ ಕೋಟ್ಯಂತರ ರೂ. ವಂಚನೆ!
- ಸೌಜನ್ಯಾ ಕೇಸ್ ಮರುತನಿಖೆ: ಎಸ್ಐಟಿಯಿಂದ ಕೈಬಿಡುವಂತೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಮನವಿ










