- Advertisement -
- Advertisement -


ಪುತ್ತೂರು: ಅನ್ಯಕೋಮಿನ ಜೋಡಿ ಭೇಟಿ ವಿಚಾರದಲ್ಲಿ ಕೆಲವೊಂದು ವೆಬ್ ನ್ಯೂಸ್ ಹಾಗೂ ಚಾನೆಲ್ ಗಳು ಪುತ್ತೂರು ಹಿಂದೂಸ್ತಾನ್ ಲಾಡ್ಜ್ ನ ಹೆಸರನ್ನು ಹಾಕಿ, ಲಾಡ್ಜ್ ನ ಫೋಟೋ ಸಹಿತ ವರದಿ ಪ್ರಕಟಿಸಿದ್ದು ಇದು ನಮ್ಮ ಸಂಸ್ಥೆಯ ಹೆಸರನ್ನು ಹಾಳು ಮಾಡುವ ಉದ್ದೇಶಕ್ಕೆ ಈ ರೀತಿಯ ಪ್ರಚಾರ ಮಾಡಲಾಗಿದೆ.
ಹಾಗಾಗಿ ನಮ್ಮ ಲಾಡ್ಜ್ ಬಗ್ಗೆ ಅಪಪ್ರಚಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದುಸ್ತಾನ್ ಲಾಡ್ಜ್ ನ ಮ್ಯಾನೇಜರ್ ಮೀರಾಜುದ್ದೀನ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ನಮ್ಮ ಲಾಡ್ಜ್ ನಲ್ಲಿ ಯಾವುದೇ ಅನ್ಯಕೋಮಿಗೆ ಸೇರಿದವರು ಯುವಕ ಯುವತಿಯರು ರೂಮ್ ಬುಕ್ ಮಾಡಿರುವುದಿಲ್ಲ. ನಾವು ಶಿಸ್ತು ಬದ್ಧವಾಗಿ ನಮ್ಮ ವ್ಯವಹಾರವನ್ನು ಮಾಡುತ್ತಿದ್ದು, ಈ ರೀತಿಯ ಅಪಪ್ರಚಾರಗಳಿಂದ ನಮ್ಮ ವ್ಯವಹಾರಕ್ಕೆ ತೊಂದರೆಯುಟಾಗುತ್ತಿದೆ. ಭಿನ್ನ ಕೋಮಿನ ಯುವಕ ಯುವತಿಯರ ಭೇಟಿಗೂ ನಮ್ಮ ಲಾಡ್ಜ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹಿಂದೂಸ್ತಾನ್ ಲಾಡ್ಜ್ ನ ಮಾಲಕ ಅಬ್ಬಾಸ್ ಶರೀಫ್ ತಿಳಿಸಿದ್ದಾರೆ.



- Advertisement -








