Saturday, June 20, 2026
spot_imgspot_img
spot_imgspot_img

ಆಸ್ತಿ ವಿಚಾರದಲ್ಲಿ ಗಲಾಟೆ; ತಂದೆಗೆ ಚಾಕು ಇರಿದ ಮಗ..!

- Advertisement -
- Advertisement -

ಆಸ್ತಿ ವಿಚಾರಕ್ಕೆ ಮಗನೊಬ್ಬ ತಂದೆಗೆ ಚಾಕು ಇರಿದಿರುವ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಕು ಇರಿತಕ್ಕೆ ಒಳಗಾದವರನ್ನು ರಾಚಪ್ಪಾಜಿ (60) ಎಂದು ಗುರುತಿಸಲಾಗಿದೆ.

ರಾಚಪ್ಪಾಜಿ ಅವರ ಮಗ ಸುಭಾಷ್ ಆಸ್ತಿ ವಿಚಾರದಲ್ಲಿ ಅಪ್ಪನೊಂದಿಗೆ ತಗಾದೆ ತೆಗೆದಿದ್ದಾನೆ. ನಂತರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ತಂದೆ ಜೊತೆಗಿದ್ದ ಮಹದೇವ್‌ ಎನ್ನುವವರ ಮೇಲೂ ದಾಳಿ ಮಾಡಿದ್ದಾನೆ. ನಂತರ ಗಂಭೀರ ಗಾಯಗೊಂಡ ರಾಚಪ್ಪಾಜಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ದವಾಖಾನೆಗೆ ದಾಖಲಿಸಿದ್ದಾರೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಲಾಗಿದೆ.

- Advertisement -

Related news

error: Content is protected !!