Saturday, September 19, 2026
spot_imgspot_img
spot_imgspot_img

ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ..!

- Advertisement -
- Advertisement -

ಬೆಳ್ತಂಗಡಿ: ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯೋರ್ವರು ತನ್ನ 9 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಜು.3 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾದವರು ಉಜಿರೆಯ ನಿನ್ನಿಕಲ್ಲು ನಿವಾಸಿ ಪ್ರಜೀತ(27) ಹಾಗೂ ಅವರ ಪುತ್ರ ಸುಮಂತ್(9 ತಿಂಗಳು) ಎಂದು ತಿಳಿದು ಬಂದಿದೆ.

ಪ್ರಜೀತ ಅವರ ಪತಿ ರಿಕ್ಷಾ ಚಾಲಕರಾಗಿದ್ದು ಕೆಲಸಕ್ಕೆ ಹೋಗಿದ್ದರು. ನಂತರ ಅವರ ತಾಯಿ ಹುಲ್ಲಿಗೆಂದು ತೋಟಕ್ಕೆ ಹೋಗಿದ್ದಾಗ ಪ್ರಜೀತ ತನ್ನ 9 ತಿಂಗಳ ಮಗನೊಂದಿಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು ಇದುವರೆಗೆ ವಾಪಾಸು ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!