Thursday, September 10, 2026
spot_imgspot_img
spot_imgspot_img

ಬ್ರಹ್ಮಾವರ: ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು; ಡೆತ್‌ನೋಟ್ ಪತ್ತೆ

- Advertisement -
- Advertisement -

ಬ್ರಹ್ಮಾವರ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 5ರ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬ್ರಹ್ಮಾವರದ ಕೆ.ಜೆ. ಥಾಮಸ್ ಅವರ ಪತ್ನಿ ಬಿನ್ಸಿ ಶೈಜು ಥಾಮಸ್ (30) ಸಾವನ್ನಪ್ಪಿದವರು. ಬಿನ್ಸಿ ಅವರ ಪತಿ ದುಬೈಯಲ್ಲಿರುವ ಕಾರಣ ಪತಿಯ ಮನೆಯಲ್ಲಿ ಮೊದಲ ಮಹಡಿಯಲ್ಲಿ ತನ್ನ ಮಗಳೊಂದಿಗೆ ವಾಸಿಸುತ್ತಿದ್ದು, ಅಕ್ಟೋಬರ್ 26ರಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ಅವರು ಇಲಿ ಪಾಷಾಣ ಸೇವಿಸಿದ್ದಾರೆ. ಇದೇ ವೇಳೆ ಡೆತ್‌ನೋಟ್ ಕೂಡಾ ಬರೆದಿಟ್ಟಿದ್ದಾರೆ. ಆದರೆ ಇಲಿಪಾಷಾಣ ಸೇವಿಸಿರುವ ವಿಷಯವನ್ನು ಯಾರೊಂದಿಗೂ ಬಾಯ್ಬಿಟ್ಟಿರಲಿಲ್ಲ.

ಅಕ್ಟೋಬರ್‍ 31ರಂದು ಅವರಲ್ಲಿ ತೀವ್ರ ವಾಂತಿ ಹಾಗೂ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬ್ರಹ್ಮಾವರ ಜೀವನ್ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನವೆಂಬರ್ 3ರಂದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನವೆಂಬರ್ 5ರಂದು ಬೆಳಗ್ಗೆ ಸಾವನ್ನಪ್ಪಿದರು.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಪತ್ತೆಯಾಗಿದ್ದು, ಕಾರಣ ತಿಳಿದು ಬಂದಿಲ್ಲ. ಲಾಲಿ ವೆಲ್ಸಿತಾ ಎಂಬುವವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!