Friday, June 5, 2026
spot_imgspot_img
spot_imgspot_img

ಸುಳ್ಯ: ಸೈಕಲ್ ಕಲಿಯಲು ಹೋದ ಬಾಲಕಿ ಮೇಲೆ ಶಾಲಾ ಕೊಠಡಿಯಲ್ಲಿ ಲೈಂಗಿಕ ಕಿರುಕುಳ!!-

- Advertisement -
- Advertisement -

ಸುಳ್ಯ: ದೇವಚಳ್ಳ ಗ್ರಾಮದ ಎಲಿಮಲೆ ಎಂಬಲ್ಲಿ ಸೈಕಲ್ ಕಲಿಯಲು ಹೋದ ಬಾಲಕಿಯೊಬ್ಬಳನ್ನು ಶಾಲಾ ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಆಡಳಿತಾಧಿಕಾರಿಯನ್ನು ವಜಾಗೊಳಿಸಲಾಗಿದೆ.

ಎಲಿಮಲೆಯ ಪ್ರತಿಷ್ಠಿತ ಖಾಸಗಿ ಶಾಲೆಯ ಅಂಗಳದಲ್ಲಿ ಬಾಲಕಿಯೊಬ್ಬಳು ತನ್ನ ಗೆಳತಿಯರೊಂದಿಗೆ ಸೈಕಲ್ ಕಲಿಯುತ್ತಿದ್ದ ವೇಳೆ ಶಾಲೆಯಲ್ಲಿದ್ದ ಆಡಳಿತಾಧಿಕಾರಿ ಬಾಲಕಿಯನ್ನು ಕರೆದು ಸೈಕಲ್ ಕೊಡಿಸುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆಯನ್ನು ಪುಸಲಾಯಿಸಿ ತನ್ನ ಕೊಠಡಿಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ನಂತರ ಬಾಲಕಿ ತನ್ನ ಪೋಷಕರಿಗೆ ಬಂದು ವಿಷಯ ತಿಳಿಸಿದ್ದು. ಅವರು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಘಟನೆಯ ಕುರಿತು ಆಡಳಿತಾಧಿಕಾರಿಯನ್ನು ವಿಚಾರಿಸಿದ್ದು. ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!