Sunday, September 13, 2026
spot_imgspot_img
spot_imgspot_img

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಬಿಜೆಪಿ ಮುಖಂಡರೋರ್ವರಿಗೆ ಚೂರಿ ಇರಿತ..!

- Advertisement -
- Advertisement -
driving

ಮಂಗಳೂರು: ಬಿಜೆಪಿ ಮುಖಂಡರೋರ್ವರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಬೆನ್ನಿಗೆ ಇರಿದು ಪರಾರಿಯಾದ ಘಟನೆ ತಡರಾತ್ರಿ ಮಾಲೆಮಾರ್ ಬಳಿ ಸಂಭವಿಸಿದೆ.

ಪಂಜಿಮೊಗರು ನಿವಾಸಿ ಬಿಜೆಪಿ ಮುಖಂಡ ರಾಜೇಶ್ (45) ಗಾಯಗೊಂಡವರು. ರಾಜೇಶ್ ಕೊಟ್ಟಾರದಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಮಾಲೆಮಾರ್ ಬಳಿ ದುಷ್ಕರ್ಮಿಗಳ ತಂಡ ಬೆನ್ನಿಗೆ ಚೂರಿಯಿಂದ ಇರಿದಿದ್ದಾರೆ.

ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಾವೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!