Monday, June 22, 2026
spot_imgspot_img
spot_imgspot_img

ಮಂಗಳೂರು: ರೈಲಿನಡಿಗೆ ಬಿದ್ದು ನವವಿವಾಹಿತ ಸಾವು

- Advertisement -
- Advertisement -

ಮಂಗಳೂರು: ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಎಕ್ಕೂರು ಜಪ್ಪು ಬಪ್ಪಲ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ.

ಜಪ್ಪಿನಮೊಗರು ತಂದೊಳಿಗೆ ನಿವಾಸಿ ವಿಶ್ವನಾಥ್ ಎಂಬಾವರ ಪುತ್ರ ಧೀರಜ್( 32) ಎಂಬಾತ ಮೃತ ಯುವಕ. ಸದ್ಯ ಜಪ್ಪುವಿನಲ್ಲಿ ಪತ್ನಿಯೊಂದಿಗೆ ವಾಸವಿದ್ದು, ಕಳೆದ 10 ತಿಂಗಳ ಹಿಂದೆಯಷ್ಟೇ ಕುತ್ತಾರಿನ ಯುವತಿಯನ್ನು ವಿವಾಹವಾಗಿದ್ದರು.

ಧೀರಜ್ ಅವರು ಬೆಳಗ್ಗೆ 6.50ಕ್ಕೆ ಮನೆಯಿಂದ ಹೊರಟು ಬಂದಿದ್ದು, ಸುಮಾರು 7 ಗಂಟೆಯ ವೇಳೆಗೆ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. ಮುಂಜಾವಿನ ವೇಳೆ ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಧೀರಜ್ ಅವರು ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!