Wednesday, July 29, 2026
spot_imgspot_img
spot_imgspot_img

ಮಂಗಳೂರು: PFI ವತಿಯಿಂದ ಎಸ್ಪಿ ಚಲೋ ಪ್ರತಿಭಟನೆ – ಖಾಕಿ ಸರ್ಪಗಾವಲು

- Advertisement -
- Advertisement -
vtv vitla
vtv vitla

ಮಂಗಳೂರು: ಉಪ್ಪಿನಂಗಡಿ ಲಾಠಿ ಚಾರ್ಜ್ ಘಟನೆಯನ್ನು ಖಂಡಿಸಿ ಪಿಎಫ್ಐ ಸಂಘಟನೆ ಇಂದು ನಡೆಸಲಿರುವ ಎಸ್ಪಿ ಚಲೋ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಪ್ರತಿಭಟನೆ ನಡೆಯುವ ಸ್ಥಳವಾದ ಹಂಪನಕಟ್ಟಾ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಕ್ಲಾಕ್ ಟವರ್ ರಸ್ತೆಯಿಂದ ಆರಂಭವಾದ ಪ್ರತಿಭಟನೆಗೆ ಪೊಲೀಸರು ಬ್ಯಾರಿಕೇಡ್ ಮೂಲಕ ತಡೆಯೊಡ್ಡಿದರೂ, ಪ್ರತಿಭಟನೆಕಾರರು ರಸ್ತೆಯಲ್ಲೇ ಕುಳಿತು ಎಸ್ಪಿ ಮತ್ತು ಡಿಜಿಪಿ ಬರುವವರೆಗೂ ಇಲ್ಲಿಂದ ಕದಲಲ್ಲ ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತೂರ್ ತಂಙಲ್ ಪ್ರತಿಭಟನೆಗೆ ಬಂದು ಪ್ರತಿಭಾಟನಾಕಾರರೊಂದಿಗೆ ಸೇರಿಕೊಂಡರು.

ಈಗಾಗಲೇ ಪೊಲೀಸ್ ಆಯುಕ್ತ ಶಶಿಕುಮಾರ್ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆ ಇಂದು ಕರೆ ನೀಡಿರುವ ಪ್ರತಿಭಟನೆ ಹಾಗೂ ರ್‍ಯಾಲಿಯಲ್ಲಿ ಪ್ರತಿಭಟನೆಗೆ ಮಾತ್ರ ಮಂಗಳೂರು ತಾಲೂಕು ಕಚೇರಿ ಮುಂದೆ ಅವಕಾಶ ನೀಡಿದ್ದಾರೆ.

ಯಾವುದೇ ರ್‍ಯಾಲಿ ಅಥವಾ ಜಾಥಾ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

vtv vitla
- Advertisement -

Related news

error: Content is protected !!