Friday, May 20, 2022
spot_imgspot_img
spot_imgspot_img

ಮಜಾ ಟಾಕೀಸ್ ಖ್ಯಾತಿಯ ನಿರೂಪಕ ಸೃಜನ್‍ ಲೋಕೇಶ್ ಬಿಡುಗಡೆಗೊಳಿಸಿದ “ಆಕೆ ಮೋಹಿನಿ” ಕಿರುಚಿತ್ರದ ಮೊದಲ ಪ್ರದರ್ಶನ ಕಾರ್ಯಕ್ರಮ

- Advertisement -
- Advertisement -

ದೀರ್ಘಾವಧಿಯ ಚಿತ್ರಗಳಾಗಲಿ, ಕಿರುಚಿತ್ರಗಳಾಗಲಿ ಕ್ರಿಯೇಟಿವಿಟಿ ಬಹಳ ಮುಖ್ಯ. ತನ್ನ ಪರಿಕಲ್ಪನೆಗೆ ರೂಪವನ್ನು ಕೊಟ್ಟು ತೆರೆಗೆ ತರುವ ಪ್ರಯತ್ನ ಎಲ್ಲರೂ ಮಾಡ್ತಾರೆ. ವೀಕ್ಷಕನನ್ನು ಹಿಡಿದಿಡುವ, ತನ್ನೆಡೆಗೆ ಸೆಳೆಯುವ ಚಿತ್ರಗಳು ಸಕ್ಸಕ್ ಆಗುತ್ತದೆ. ಈ ರೀತಿಯಾಗಿ ತನ್ನ ಮೊದಲೆರಡು ಕಿರುಚಿತ್ರಗಳಾದ ಧರ್ಮದೈವ ಭಾಗ-1 ಮತ್ತು ಭಾಗ-2 ರ ಮೂಲಕ ನಾಡಿನ ಗಮನ ಸೆಳೆದ ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನೇತೃತ್ವದಲ್ಲಿ ಅಂಬಾ ಕ್ರಿಯೇಷನ್ ನಿಂದ ಸಂತೋಷ್ ಶೆಟ್ಟಿ ಅಂಗಡಿಗುತ್ತು ಕೊಳತ್ತೂರು ನಿರ್ಮಾಣದಲ್ಲಿ ಮೂಡಿಬಂದ ಉತ್ತಮ ಸಂದೇಶವನ್ನು ಒಳಗೊಂಡ “ಆಕೆ ಮೋಹಿನಿ” ಕಿರುಚಿತ್ರದ ಮೊದಲ ಪ್ರದರ್ಶನ ಪುತ್ತೂರಿನ ಮಾತೃಛಾಯೆ ಸಭಾಂಗಣದಲ್ಲಿ ನಡೆಯಿತು.

ಟಿಕ್‍ಟಾಕ್ ಸ್ಟಾರ್ ಧನ್‍ರಾಜ್ ಆಚಾರ್ಯ, ರವಿಸ್ನೇಹಿತ್, ರಂಗಭೂಮಿ ಹಾಗೂ ತುಳು-ಕನ್ನಡ ಚಲನಚಿತ್ರ ನಟ ರಮೇಶ್ ರೈ ಕುಕ್ಕುವಳ್ಳಿ ಹಾಗೂ ಪ್ರಸಿದ್ದ ಕಲಾವಿದರ ನಟನೆ ಹಾಗೂ ತಾಂತ್ರಿಕ ವರ್ಗದಿಂದ ಮೂಡಿಬಂದ ಈ ಕಿರುಚಿತ್ರವನ್ನು ಮಜಾ ಟಾಕೀಸ್ ಖ್ಯಾತಿಯ ನಿರೂಪಕ ಸೃಜನ್‍ಲೋಕೇಶ್ ಅವರು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಕಿರುಚಿತ್ರದ ಬಗ್ಗೆ ಮೆಚ್ಚುಯನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಆಕೆ ಮೋಹಿನಿ ಕಿರುಚಿತ್ರದ ಮೊದಲ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಯು.ಪಿ ಶಿವಾನಂದ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕಿರುಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭಹಾರೈಸಿದ್ರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ, ವಿಮರ್ಶಕ, ಪ್ರೊಫೆಸರ್ ಡಾ. ನರೇಂದ್ರ ರೈ ದೇರ್ಲ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್‍ಚಂದ್ರ ರೈ ತೋಟ ಮಾತನಾಡಿ ಕಿರುಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ರು.

ಕಾರ್ಯಕ್ರಮದಲ್ಲಿ ತಂಡದ ಎಲ್ಲಾ ಕಲಾವಿದರನ್ನು-ತಾಂತ್ರಿಕ ವರ್ಗದವರನ್ನು ಗುರುತಿಸಿ ಗೌರವಿಸಲಾಯಿತು.
ಆಕೆ ಮೋಹಿನಿ ಮೊದಲ ಪ್ರದರ್ಶನವನ್ನು ತಂಡದ ಕಲಾವಿದರು ಪ್ರೇಕ್ಷಕರು ಮೆಚ್ಚುಗೆಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ,ರೈ ಪ್ರಾರ್ಥಿಸಿದರು. ಕಿರು ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ವಂದಿಸಿದರು . ಆಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದ್ರು.

ಕಾರ್ಯಕ್ರಮದಲ್ಲಿ ಶರತ್ ರೈ ಕಾವು, ರಾಮ್‍ದಾಸ್ ರೈ, ವಿಟಿವಿ ಚಾನೆಲ್ ನಿರ್ದೇಶಕ ರಾಮ್‍ದಾಸ್ ಶೆಟ್ಟಿ ವಿಟ್ಲ, ಆಕೆ ಮೋಹಿನಿ ಚಿತ್ರ ತಂಡ ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದವರು, ಹಾಗೂ ಅನೇಕ ಕಲಾಭಿಮಾನಿಗಳು ಉಪಸ್ಥಿತಿದ್ದರು.

- Advertisement -

Related news

error: Content is protected !!