Monday, September 21, 2026
spot_imgspot_img
spot_imgspot_img

ಮೇ.26 ರಿಂದ ಮೇ.31: ಇಡ್ಕಿದು ಸೇವಾ ಸಹಕಾರಿ ಸಂಘ (ನಿ.) ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು ಇವರ ವತಿಯಿಂದ, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇವರ ಸಹಯೋಗದಲ್ಲಿ “ಉದ್ಯೋಗ ನೈಪುಣ್ಯ ತರಬೇತಿ ಶಿಬಿರ”

- Advertisement -
- Advertisement -

ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು ಇವರ ವತಿಯಿಂದ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರು ಇವರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಮೇ.26 ರಿಂದ ಮೇ.31 ರವರೆಗೆ ಉರಿಮಜಲಿನ ಶತಾಮೃತ ಸಂಕೀರ್ಣದಲ್ಲಿ ನಡೆಯಲಿದೆ.

ಮೇ.26 ರಂದು ಪುರ್ವಾಹ್ನ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಇದರ ಮಾಜಿ ಸದಸ್ಯರಾದ ಎಸ್. ಆರ್. ರಂಗಮೂರ್ತಿಯವರು ನಡೆಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬಿ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಸಂಚಾಲಕರು ಸಿ. ಮಹಾದೇವ ಶಾಸ್ತ್ರಿ ಮಣಿಲ ರವರು ಭಾಗವಹಿಸಲಿದ್ದಾರೆ.

ಮೇ.31 ರಂದು ಅಪರಾಹ್ನ 3 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಮಾಜ ಕಲ್ಯಾಣ ಮತ್ತು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ದ್ವೀಪ ಪ್ರಜ್ವಲನೆ ಮಾಡಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬಿ ರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು, ರಾಜ್ಯ ಸಂಚಾಲಕರು, ಸಹಕಾರಿ ಪ್ರಕೋಷ್ಠ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕರ್ನಾಟಕ ಸರ್ಕಾರದ ವಿಧಾನ ಪರಿಷತ್‌ನ ಮಾಜಿ ಸದಸ್ಯರು, ಇಡ್ಕಿದು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಸುಧೀರ್ ಕುಮಾರ್ ಶೆಟ್ಟಿ ಎಂ., ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಕಾರ್ಯದರ್ಶಿಗಳು ಡಾ| ಕೆ. ಎಂ. ಕೃಷ್ಣ ಭಟ್ ಕೊಂಕೋಡಿ, ವಿಶ್ವೇಶ್ವರ ಭಟ್ ಬಂಗಾರಡ್ಕ ಅಧ್ಯಕ್ಷರು, ಆಡಳಿತ ಮಂಡಳಿ, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಪಡೆದುಕೊಳ್ಳಬೇಕಾಗಿ ಅಮೃತ ಸಿಂಚನ ರೈತ ಸೇವಾ ಒಕ್ಕೂಟ ಇಡ್ಕಿದು ಇದರ ಅಧ್ಯಕ್ಷರು, ಸದಸ್ಯರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಪುತ್ತೂರು ಇದರ ಅಧ್ಯಕ್ಷರು, ಸದಸ್ಯರು, ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ / ಉಪನ್ಯಾಸಕೇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ.26ನೇ ಗುರುವಾರ ಮಧ್ಯಾಹ್ನ 2.30ರಿಂದ ಸಣ್ಣ ಉದ್ಯಮ, ಗುಡಿ ಕೈಗಾರಿಕೆ, ಮುದ್ರಾ ಯೋಜನೆಯ ಮೂಲಕ ಸ್ವ-ಉದ್ಯೋಗಕ್ಕೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಶ್ರೀ ಪ್ರವೀಣ್‌ ಎಂ. ಪಿ. ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್, ಕೆನರಾ ಬ್ಯಾಂಕ್, ಮಂಗಳೂರು ಇವರು ವಿಶೇಷ ಮಾಹಿತಿ ನೀಡಲಿದ್ದಾರೆ.

- Advertisement -

Related news

error: Content is protected !!