Thursday, July 30, 2026
spot_imgspot_img
spot_imgspot_img

ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ; ವಿಟ್ಲದಲ್ಲಿ ಭಾಗಶಃ ಯಶಸ್ವಿ

- Advertisement -
- Advertisement -
vtv vitla
vtv vitla

ವಿಟ್ಲ: ರಾಜ್ಯ ಸರ್ಕಾರವು ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದಕ್ಕೆ ಕರಾವಳಿಯಲ್ಲೂ ಬೆಂಬಲ ಸೂಚಿಸಿದ್ದು, ವಿಟ್ಲದಲ್ಲಿ ಭಾಗಶಃ ಯಶಸ್ವಿಯಾಗಿದೆ.

ವಿಟ್ಲ ಪೇಟೆಯಲ್ಲಿ ಬೆಳಿಗ್ಗೆನಿಂದಲೇ ಎಲ್ಲಾ ಅಂಗಡಿಗಳ ಮಾಲಕರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. 11 ಗಂಟೆ ಬಳಿಕ ವಿಟ್ಲ ಪೊಲೀಸರು ಪೇಟೆಗೆ ಆಗಮಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು.

vtv vitla

ಬಸ್, ಕಾರು, ಆಟೋ ರಿಕ್ಷಾ ಮತ್ತು ಇನ್ನಿತರ ಖಾಸಗಿ ವಾಹನಗಳ ಸಂಚಾರ ಎಂದಿನಂತಿದ್ದು, ಅಗತ್ಯ ವಸ್ತುಗಳಾದ ತರಕಾರಿ, ಹಾಲು, ದಿನಸಿ, ಮೆಡಿಕಲ್ ವ್ಯಾಪಾರ ಮಾಡುತ್ತಿದ್ದು, ಜನರು ಆಗಮಿಸಿ ವಸ್ತುಗಳನ್ನು ಖರೀದಿಸಿದರು.

ಪೊಲೀಸರು ಪೇಟೆಯಿಂದ ನಿರ್ಗಮಿಸಿದ ಬಳಿಕ ಕೆಲ ಬೆರಳೆಣಿಕೆಯಷ್ಟು ಅಂಗಡಿಗಳು ಅರ್ಧ ಬಾಗಿಲು ಹಾಕಿದ್ದು, ಇನ್ನೂ ಕೆಲವರು ಸಂಪೂರ್ಣವಾಗಿ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

- Advertisement -

Related news

error: Content is protected !!