Tuesday, July 28, 2026
spot_imgspot_img
spot_imgspot_img

ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಮುಂದಾದ ಬಿಜೆಪಿ ಹೈಕಮಾಂಡ್‌; ಮತ್ತೆ ಮುಖ್ಯಮಂತ್ರಿಯಾಗಲಿ ದ್ದಾರೆ ಡಿ.ವಿ.ಸದಾನಂದ ಗೌಡ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್‌ ಸಿಎಂ ಬದಲಾವಣೆಗೆ ಮುಂದಾಗಿದೆ.

ಯಡಿಯೂರಪ್ಪ ಹುದ್ದೆಯಿಂದ ಕೆಳಗಿಳಿದ್ರೆ ಸಿಎಂ ಯಾರೂ ಅನ್ನೋ ಪ್ರಶ್ನೆಗೆ ಹೈಕಮಾಂಡ್‌ ಉತ್ತರ ನೀಡಿದ್ದು, ಸಂಸದ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗೋದು ಬಹುತೇಕ ಖಚಿತ.

ನಾಯಕತ್ವದ ವಿಚಾರದಲ್ಲಿಯೇ ಬಿಜೆಪಿ ಸದ್ಯ ಒಡೆದ ಮನೆ. ಸಿಎಂ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿರೋಧಿ ಪಾಳಯ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಬೀಳ್ಕೊಡಲು ಹೈಕಮಾಂಡ್‌ ಮುಂದಾಗಿದೆ.

ರಾಜ್ಯದಲ್ಲಿ ಸಿಎಂ ಹುದ್ದೆಗೆ ಒಂದಿಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಆದ್ರೆ ಆ ಹೆಸರುಗಳ ಕುರಿತು ಪಕ್ಷದಲ್ಲಿಯೇ ವಿರೋಧವಿದೆ. ಬಣದ ಶಾಸಕರನ್ನು ಸಿಎಂ ಹುದ್ದೆಯಲ್ಲಿ ಕೂರಿಸಿದ್ರೆ ಸರಕಾರಕ್ಕೆ ಡ್ಯಾಮೇಜ್‌ ಆಗೋದು ಖಚಿತ.

ಇನ್ನೊಂದೆಡೆ ಪಕ್ಷದ ಬಂಡಾಯ ನಾಯಕರ ಜೊತೆಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲೇ ಬೇಕಾದ ಸ್ಥಿತಿಯಲ್ಲಿದೆ ಬಿಜೆಪಿ. ಹೀಗಾಗಿ ಬಂಡಾಯದ ಜೊತೆಗೆ ಪಕ್ಷವನ್ನು ಮುನ್ನಡೆಸುವ ಸಮರ್ಥರನ್ನು ಸಿಎಂ ಹುದ್ದೆಯಲ್ಲಿ ಕೂರಿಸಲು ಬಿಜೆಪಿ ಹೈಕಮಾಂಡ್‌ ಹಾಗೂ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ, ವಿಜಯೇಂದ್ರ ರನ್ನು ಉಪಮುಖ್ಯಮಂತ್ರಿ ಮಾಡುವುದು ಬಿಜೆಪಿ ಬಲ್ಲ ಮೂಲಗಳಿಂದ ಬಹುತೇಕ ಖಚಿತವಾಗಿದೆ

- Advertisement -

Related news

error: Content is protected !!